Site icon PowerTV

ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ

ಬೆಂಗಳೂರು : ಮಾಜಿ ಸಂಸದೆಯೂ ಆಗಿರುವ ರಮ್ಯಾ ತಮ್ಮ ಬಗ್ಗೆ ಇನ್‌ಸ್ಟಾಗ್ರಾಮ್ನಲ್ಲಿ ನಿಂದನೆ ಮಾಡಿದ ದುಷ್ಕರ್ಮಿಯ ವಿರುದ್ಧ ದೂರು ನೀಡಿದ್ದಾರೆ.

ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ. ಬೆಂಗಳೂರಿನ ಹಲಸೂರು ಗೇಟ್ ಠಾಣೆ ಬಳಿ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ಕೊಡುವ ಮುನ್ನ ಕಮಿಷನರ್ ಜೊತೆ ಚರ್ಚೆ ಮಾಡಿದ ರಮ್ಯಾ, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

ಸೆಂಟ್ರಲ್ ವಿಭಾಗದ ಸೈಬರ್ ಕ್ರೈಮ್‌ ಪೊಲೀಸರಿಂದ ತನಿಖೆ ಶುರುವಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಮ್ಮ ವಕೀಲರನ್ನು ಕಳುಹಿಸಿ ಸೆಲೆಬ್ರಿಟಿಗಳು ದೂರು ದಾಖಲು ಮಾಡುತ್ತಾರೆ. ಆದರೆ ರಮ್ಯಾ ಸ್ವತಃ ಸ್ಟೇಷನ್‌ಗೆ ತೆರಳಿ ದೂರು ದಾಖಲಿಸಿದ್ದಾರೆ.

Exit mobile version