Site icon PowerTV

ನಮ್ಮದು ಹಲೋ ಹಲೋ ಅಷ್ಟೇ : ಮಾಜಿ ಸಿಎಂ ಸಿದ್ದರಾಮಯ್ಯ

ಧಾರವಾಡ : ಜೆಡಿಎಸ್​ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿ ಹಾಕಿದ್ದೇವೆ ಎಂದು ಧಾರವಾಡದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆ ಹಿನ್ನೆಲೆ ಕುಮಾರಸ್ವಾಮಿ ಕೋಮುವಾದಿ ಗಳನ್ನ ಸೋಲಿಸೋಕೆ ಕೈ-ತೆನೆ ಒಂದಾಗಬೇಕು ಅನ್ನೋ ಹೇಳಿಕೆಯನ್ನು ನಾವು ಯಾವತ್ತಿಗೂ ಕೋಮುವಾದಿಗಳನ್ನ ವಿರೋಧಿಸುತ್ತೇವೆ. ಜೆಡಿಎಸ್ ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿ ಹಾಕಿದ್ದೇವೆ ಎಂದರು.

ಅದಲ್ಲದೇ, ನಮ್ಮ ಅಭ್ಯರ್ಥಿ ಹಾಕಿದ ಮೇಲೆ ಅವರು ಹಾಕಿದ್ದಾರೆ. ಅವರು ಕೋಮುವಾದಿ ಅಭ್ಯರ್ಥಿ ಸೋಲಿಸಬೇಕು ಅಂತಿದ್ದರೆ ಅವರು ಅಭ್ಯರ್ಥಿ ಹಾಕಬೇಕಿರಲಿಲ್ಲ. ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಹಾಕಿದ್ದೇವೆ. ಮನ್ಸೂರ್ ಅಲಿಖಾನ್​ನ್ನ ಹಾಕಿದ್ದೇವೆ. ಅವರು ಗೆಲ್ಲಿಸಬೇಕು ಅಂತಿದ್ದರೆ ಅಭ್ಯರ್ಥಿ ಬಿಟ್ಟು ನಮಗೆ ವೋಟ್ ಹಾಕಲಿ ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ..? ಅವರಿಗೆ ಕೇಳಿ ಪ್ರಶ್ನೆನಾ..! ನಾವು ಹಾಕಿರಲಿಲ್ಲ, ಕುಮಾರಸ್ವಾಮಿ ಬಳಿ 37 ಜನ ಇದ್ರು ಕೂಡ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಅವರನ್ನೇ ಸಿಎಂ ಮಾಡಿದ್ದೆವು, ದೇವೇಗೌಡರು ಪ್ರಧಾನ ಮಂತ್ರಿ ಆಗೋಕೆ ನಾವು ಬೆಂಬಲ ನೀಡಿದ್ದೇವೆ ಎಂದು ಹೇಳಿದರು.

ಇನ್ನು, ನಮಗೆ ಈಗ ಅವರು ಬೆಂಬಲ ಕೊಡಲಿ. ಕೋಮುವಾದಿ ಸೋಲಿಸೋಕೆ ನಮಗೆ ಬೆಂಬಲ ಕೊಡಲಿ, ನಾವೇ ಸೋಲಿಸುತ್ತೇವೆ. ನಾವು ಅನೇಕ ಸಾರಿ ಸಹಾಯ ಮಾಡಿದ್ದೇವೆ ಅವರಿಗೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭೇಟಿ ವಿಚಾರವಾಗಿ ಮಾತನಾಡಿದ ಅವರು ನಮ್ಮದು ಹಲೋ ಹಲೋ ಅಷ್ಟೇ. ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಗುರಿಕಾರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಎಲ್ಲರೂ ಈ ಸಾರಿ ಬದಲಾವಣೆ ಬಯಸಿದ್ದಾರೆ. 30 ವರ್ಷದಿಂದ ಶಿಕ್ಷಕರ ಪರವಾಗಿ ಹೋರಾಡಿದ ವ್ಯಕ್ತಿ ಅವರು ಎಂದು ಹೇಳಿದರು.

Exit mobile version