Site icon PowerTV

ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಅರ್ಥ ಮಾಡಿಸೋದು ‘ಚಾರ್ಲಿ’: ಸಂತೋಷ್ ಆನಂದ್​​ರಾಮ್​​

ಬೆಂಗಳೂರು : ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ 777 ಚಾರ್ಲಿ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಸದ್ಯ ಸಿನಿಮಾತಂಡ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು ಅನೇಕ ಕಡೆ ಪ್ರೀಮಿಯರ್ ಶೋ ಕೂಡ ಮಾಡಲಾಗಿದೆ.

ಇತ್ತೀಚಿಗಷ್ಟೆ ಕರ್ನಾಟಕದಲ್ಲೂ ಚಾರ್ಲಿ ಸೆಲೆಬ್ರಿಟಿ ಶೋ ಮಾಡಲಾಗಿತ್ತು. ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಚಾರ್ಲಿ ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್ 777 ಚಾರ್ಲಿಯನ್ನು ಹಾಡಿ ಹೊಗಳಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ಸಂತೋಷ್ ಆನಂದ್ ರಾಮ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಪತ್ರ ಬರೆದಿದ್ದಾರೆ. ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಅರ್ಥ ಮಾಡಿಸುವ ಸಿನಿಮಾ ಚಾರ್ಲಿ. ರಕ್ಷಿತ್ ಶೆಟ್ಟಿ ಶ್ರೇಷ್ಠವಾದ ಮಾನವೀಯತೆಯನ್ನು ಮೆರೆದಿದ್ದಾರೆ. ನೈಜ ಬದುಕಿನಲ್ಲಿ ಅಂತ ವ್ಯಕ್ತಿಯಾಗಿದ್ದರೆ ಮಾತ್ರ 3 ವರ್ಷ ಕಾದು ಈ ಚಿತ್ರವನ್ನು ತೆರೆ ಮೇಲೆ ತರಲು ಸಾಧ್ಯ. ಇಂಥ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು. ಕಿರಣ್ ರಾಜ್ ಹಾಗೂ ತಂಡಕ್ಕೆ ಶುಭಾಶಯಗಳು’ ಎಂದು ಪತ್ರದಲ್ಲಿ ಬರೆದಿದ್ದಾರೆ.

Exit mobile version