Site icon PowerTV

ಅಂತರ್ಜಾತಿ ವಿವಾಹ, ಅಳಿಯನನ್ನೇ ಕೊಂದ ಮಾವ

ಬಿಹಾರ : ಮರ್ಯಾದಾ ಹತ್ಯೆಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಳಿಯನನ್ನೇ ಮಾವ ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣ ನಡೆದಿದೆ.

ನಿವೃತ್ತ ಸೇನಾ ಸಿಬ್ಬಂದಿಯಾಗಿರುವ ಮಾವ, ತನ್ನ ಮಗನ ಸಹಾಯದಿಂದ ಅಳಿಯನಿಗೆ ಗುಂಡು ಹಾರಿಸಿದ್ದಾರೆ. ಬಿಹಾರದ ಬಕ್ಸರ್ ಜಿಲ್ಲೆಯ ದುಮ್ರಾವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷೌರಿಕನ ಅಂಗಡಿಯಲ್ಲಿ ವ್ಯಕ್ತಿಯೊಬ್ಬ ಶೇವ್ ಮಾಡಿಸಿಕೊಳ್ಳುತ್ತಿರುವಾಗ, ಅವನ ಮುಖಕ್ಕೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಬಳಿಕ ಇಬ್ಬರೂ ಸೇರಿ ಅಳಿಯನನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ಕಾಲಿನಿಂದ ತುಳಿದು ಮತ್ತೊಮ್ಮೆ ಗುಂಡು ಹಾರಿಸಿ, ಆತನ ತಲೆಯ ಮೇಲೆ ಕಾಲಿಟ್ಟು ಅಲ್ಲಿಂದ ಹೊರಡುವ ಮುನ್ನ ಅವನನ್ನು ಪದೇ ಪದೇ ಒದೆಯುವುದಲ್ಲದೆ, ಭೀಕರವಾಗಿ ಹೊಡೆದಿದ್ದಾರೆ. ಇನ್ನು, ಇಡೀ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Exit mobile version