Site icon PowerTV

11 ಲಕ್ಷ 50 ಸಾವಿರ ರೂ.ಗೆ ಭಲೇ ಬಸವ ಮಾರಾಟ

ಬಾಗಲಕೋಟೆ : ಸಾಕಿ ಬೆಳೆಸಿದ ಎತ್ತನ್ನು ಹೆಚ್ಚೆಂದರೆ 50 ಸಾವಿರ ಅಥವಾ 1 ಲಕ್ಷ ರೂ.ಗೆ ಮಾರಾಟ ಮಾಡಬಹುದು. ಆದರೆ  ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ತಾವು ಸಾಕಿದ ಎತ್ತನ್ನು ದಾಖಲೆಯ ಬರೋಬ್ಬರಿ 11.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.

11.50 ಲಕ್ಷ ರೂ.ಗೆ ಮಾರಾಟವಾಗಿರುವ ಎತ್ತು ತೆರೆದಬಂಡಿ ಎತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದೆ.
ರೈತನ ಕುಟುಂಬ ಆರು ವರ್ಷಗಳ ಹಿಂದೆ 45 ಸಾವಿರ ರೂಪಾಯಿಗೆ ಈ ಎತ್ತನ್ನು ಖರೀದಿ ಮಾಡಿದ್ರು. ಸೂರ್ಯ ಹೆಸರಿನ ಒಂಭತ್ತು ವರ್ಷ ವಯಸ್ಸಿನ ಕಿಲಾರಿ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿ ಅಂದಾಜು 8 ಲಕ್ಷ ರೂ. ಬೈಕ್, ಚಿನ್ನ, ಬೆಳ್ಳಿ, ನಗದು ಹಣ ಗೆದ್ದು ತಂದಿದೆ.

Exit mobile version