Site icon PowerTV

‘ವಿಕ್ರಮ್’ ಸಕ್ಸಸ್: ಕನ್ನಡದಲ್ಲಿ ಧನ್ಯವಾದ ತಿಳಿಸಿದ ಕಮಲ್ ಹಾಸನ್

ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಟಿಸಿರುವ ‘ವಿಕ್ರಮ್’ ಸಿನಿಮಾವು ಆರಂಭದಿಂದಲೂ ಉತ್ತಮ ಗಳಿಕೆ ಮಾಡುತ್ತಿದೆ. ಮೊದಲ ದಿನವೇ 60 ಕೋಟಿ ರೂ.ಗಳಿಗೂ ಅಧಿಕ ಕಮಾಯಿ ಮಾಡಿತ್ತು. ಇದೀಗ ನಾಲ್ಕು ದಿನಗಳಿಗೆ ವಿಶ್ವಾದ್ಯಂತ ಬರೋಬ್ಬರಿ 175 ಕೋಟಿ ರೂಪಾಯಿಗಳನ್ನು ‘ವಿಕ್ರಮ್’ ಗಳಿಸಿದೆ. ತಮಿಳುನಾಡು ಒಂದರಲ್ಲೇ ನೂರು ಕೋಟಿ ರೂಪಾಯಿ ಸಮೀಪ ಗಳಿಕೆ ಆಗಿದೆ ಎಂಬ ಮಾಹಿತಿ ಇದೆ. ಎಲ್ಲ ಕಡೆಗಳಲ್ಲಿಯೂ ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಕಮಲ್ ಹಾಸನ್ ನಟರಾಗಿಯೂ, ನಿರ್ಮಾಪಕರಾಗಿಯೂ ಗೆಲುವು ಸಾಧಿಸಿದ್ದಾರೆ.

ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾವನ್ನು ಯಾವಾಗಲು ಬೆಂಬಲಿಸುತ್ತಾ ಬಂದಿದ್ದಾರೆ. ಹಾಗೆಯೇ ಒಳ್ಳೆಯ ನಟರನ್ನು ಬೆಂಬಲಿಸಿದ್ದಾರೆ ಎಂದು ಕಾಲಿವುಡ್ ಸ್ಟಾರ್ ನಟ ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಸಕ್ಸಸ್ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ.

ಕಮಲ್ ಹಾಸನ್ ಬಾಯಲ್ಲಿ ಕನ್ನಡ ಹೇಳಿ ಅಭಿಮಾನಿಗಳ ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 2 ದಿನಗಳಲ್ಲೇ 100 ಕೋಟಿ ಕ್ಲಬ್ ಸೇರುವ ಮೂಲಕ ಭರ್ಜರಿ ಗಳಿಕೆ ಮಾಡಿದೆ. ಸದ್ಯ ರಿಲೀಸ್ ಆಗಿ 4 ದಿನಗಳಲ್ಲಿ ಸಿನಿಮಾ 175 ಕೋಟಿ ಬಾಚಿಕೊಂಡಿದೆ ಎನ್ನಲಾಗಿದೆ. ಸಿನಿಮಾ ಗೆದ್ದ ಖುಷಿಯಲ್ಲಿ ಕಮಲ್ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಮಾತನಾಡಿ ಧನ್ಯವಾದ ತಿಳಿಸಿದ್ದಾರೆ.

Exit mobile version