Site icon PowerTV

‘ಸಪ್ತ ಸಾಗರದಾಚೆ ಎಲ್ಲೋ’ ಟೀಸರ್ ರಿಲೀಸ್

ಸಿಂಪಲ್ ಸ್ಟಾರ್’, ನಟ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ತೆರೆಗೆ ಬರೋದಕ್ಕೆ ರೆಡಿಯಾಗಿದ್ದು, ಎಲ್ಲೆಡೆ ಕಟೌಟ್‌ಗಳು ರಾರಾಜಿಸುತ್ತಿದೆ.

ಜೂನ್ 10ರಂದು ಸಿನಿಮಾ ತೆರೆಗೆ ಬರಲಿದ್ದು, ಕ್ಷಣಗಣನೆ ಆರಂಭವಾಗಿದೆ. ಇದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಗಿಫ್ಟ್ ಅಂತಾನೇ ಹೇಳಲಾಗ್ತಿದೆ. ಇದರ ಜೊತೆಗೆ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ‘ಸಪ್ತಸಾಗರದಾಚೆ ಎಲ್ಲೋ’ ಕೂಡ ರೆಡಿಯಾಗಿದೆ.

ರಕ್ಷಿತ್ ಶೆಟ್ಟಿ ಬರ್ತ್ ಡೆ ಗಿಫ್ಟ್ ಎನ್ನುವಂತೆ ಈ ಸಿನಿಮಾದ ಟೀಸರ್ ಇಂದು ರೆಡಿಯಾಗಿದೆ. ಹಾಗಾದ್ರೆ ಸಪ್ತಸಾಗರದಾಚೆ ಎಲ್ಲೋ ಟೀಸರ್ ಹೇಗಿದೆ? 1 ನಿಮಿಷ 44 ಸೆಕೆಂಡ್‌ನ ಈ ಟೀಸರ್ ರಕ್ಷಿತ್ ಶೆಟ್ಟಿ ಬರ್ತ್ ಡೇ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಹೇಮಂತ್ ರಾವ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್‌ ಬಹುತೇಕ ಮುಕ್ತಾಯವಾಗಿದೆ.

Exit mobile version