Site icon PowerTV

RSS ತುಳಿಯುವ ಕೆಲಸ ನಿನ್ನೆ-ಮೊನ್ನೆಯದಲ್ಲ : ಬಿ.ವೈ.ವಿಜಯೇಂದ್ರ

ಮಂಡ್ಯ : RSS ಚಡ್ಡಿ ಸುಡುವ ಅಭಿಯಾನ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಮಂಡ್ಯದಲ್ಲಿ ಬಿ.ವೈ.ವಿಜಯೇಂದ್ರ ಹೇಳಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಹೇಳಿಕೆ ಅವರಿಗೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.

RSS ಅನ್ನು ತುಳಿಯುವ ಕೆಲಸ ನಿನ್ನೆ-ಮೊನ್ನೆಯದಲ್ಲ. ಸ್ವಾತಂತ್ರ್ಯ ಬಂದಾಗಿಂದಲೂ ಆ ಕೆಲಸ ನಡೀತ್ತಿದೆ. ಆದರೂ ಅದನ್ನೆಲ್ಲಾ ತಲೆಗೆ ಹಾಕಿಕೊಳ್ಳದೆ RSS ಸೇವೆ ಎಂಬ ಯಜ್ಞದಲ್ಲಿ ತೊಡಗಿಸಿಕೊಂಡು, ಬೆಳೆದಿದೆ. ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ ಅನ್ಸುತ್ತೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಆಮೆ-ಮೊಲದ ಕಥೆಯನ್ನು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳುವ ಮೂಲಕ ತಿರುಗೇಟು ಕೊಟ್ಟರು.

Exit mobile version