Site icon PowerTV

ಕಾಂಗ್ರೆಸ್​​ ಉಗ್ರಗಾಮಿಗಳ ಸಂತಾನ : ಶಾಸಕ ಸಿದ್ದು ಸವದಿ

ಬಾಗಲಕೋಟೆ: RSS ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿಕೆ ನೀಡಿದ್ದ ಕೈ ನಾಯಕರ ವಿರುದ್ಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ನಾಯಿಗೆ ಹೋಲಿಸಿದ್ದಾರೆ.

ಆರ್ ಎಸ್ ಎಸ್ ಚಡ್ಡಿ ಬಗ್ಗೆ ಕೈನಾಯಕರ ಹೇಳಿಕೆ ವಿಚಾರ‌‌ಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ಹೋಗುತ್ತಿರುತ್ತದೆ ಶ್ವಾನ ಬೊಗಳುತ್ತಿರುತ್ತವೆ. ಆನೆ ಯಾವಾಗಲೂ ಉತ್ತರ ಕೊಡೋದಿಲ್ಲ. ಆದ್ರೆ ಶ್ವಾನಗಳು ಬೊಗಳುತ್ತಿರುತ್ತವೆ ಎಂದು ಕಾಂಗ್ರೆಸ್ ಗೆ ಸಿದ್ದು ಸವದಿ ತಿರುಗೇಟು ನೀಡಿದ್ದಾರೆ.

ಆರ್ ಎಸ್ ಎಸ್ ನವರು ಯಾರಿಗೂ ಉತ್ತರ ಕೊಡೋದಕ್ಕೆ ಹೋಗೋದಿಲ್ಲ. ರಾಷ್ಟ್ರಾಭಿಮಾನಿಗಳ ಸಂಘ ಆರ್ ಎಸ್ ಎಸ್. ಈ ಸಂಘದ ಸಂಸ್ಕಾರ ಪಡೆದುಕೊಂಡವರು ಎಲ್ಲಾ ಕ್ಷೇತ್ರದಲ್ಲಿ ಇದಾರೆ. ಅದಕ್ಕಾಗಿ ದೇಶ ಇಂದು ಸುಭದ್ರವಾಗಿದೆ ಎಂದರು. ಮೋದಿ, ಅಮಿತ್ ಶಾ, ಯಡಿಯೂರಪ್ಪನಂತಹ ನಾಯಕರು ಆರ್ ಎಸ್ ಎಸ್ ನಿಂದ ಸಂಸ್ಕಾರ ಪಡೆದುಕೊಂಡವರು. ರಾಜಕೀಯ ಕ್ಷೇತ್ರದ ಶುದ್ದೀಕರಣಕ್ಕಾಗಿ ಈ ಸಂಘವು ಅನೇಕ ಮುಖಂಡರನ್ನು ರಾಜಕೀಯ ಕ್ಷೇತ್ರಕ್ಕೆ ಕಳಿಸಿದೆ. ಅಂತದರ ಬಗ್ಗೆ ಮಾತಾಡ್ತಾರೆಂದರೆ ಅವರಿಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲ ಎಂದು ಅರ್ಥ ಅಂತಾ ವ್ಯಂಗ್ಯವಾಡಿದರು.

ಇನ್ನು ಚಡ್ಡಿಯನ್ನು ಕೇವಲ ಸಂಘದವರು ಮಾತ್ರ ಹಾಕಿಕೊಳ್ಳುತ್ತಿರಲಿಲ್ಲ. ಮೊದಲು ಪೊಲೀಸರು, ಮಿಲಿಟರಿ ಒಳಗೂ ಚಡ್ಡಿಗಳಿದಾವೆ. ಅವರೆಲ್ಲರಿಗೂ ನೀವು ಅವಮಾನ ಮಾಡಿದ ಹಾಗೆ. ನೀವು ದೇಶದ ಸಂಸ್ಕೃತಿ ಅವಮಾನ ಮಾಡೋದಕ್ಕೆ ಮಾತ್ರ ಬಾಯಿ ತೆರೆಯುತ್ತೀರಿ. ಭಯೋತ್ಪಾದಕರು, ಉಗ್ರಗಾಮಿಗಳ ಬಗ್ಗೆ ಮಾತಾಡೋದಕ್ಕೆ ನಿಮಗೆ ಧೈರ್ಯ ಆಗೋದಿಲ್ಲ. ಅದಕ್ಕೆ ನಾನು ಭಯೋತ್ಪಾದಕರ,ಉಗ್ರಗಾಮಿಗಳ ಸಂತಾನ ಕಾಂಗ್ರೆಸ್​​ ಅಂತ ಹೇಳಿದ್ದೇನೆ ಎಂದು ಕಿಡಿಕಾರಿದರು.

Exit mobile version