ಮಹಾಶಿವನ ಪೂಜೆಯಲ್ಲಿ ಈ ಐದು ವಸ್ತುಗಳನ್ನು ಯಾರು ಬಳಸಬೇಡಿ

ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ಹಾಗೆನೇ ಶಿವನನ್ನು ಬೋಲೆನಾಥ ಎಂದೂ ಕರೆಯುತ್ತಾರೆ. ಯಾಕೆಂದರೆ ಈಶ್ವರನ್ನು ಭಕ್ತರ ಭಕ್ತಿಗೆ ಅತ್ಯಂತ ಬೇಗನೆ ಪ್ರಸನ್ನನಾಗುತ್ತಾನೆ. ಆದರೆ ಶಿವಲಿಂಗದ ಪೂಜೆ ವೇಳೆ ಕೆಲ ವಸ್ತುಗಳ ಬಳಕೆ ನಿಷೇಧ ಹಾಗಾಹಿ ನೀವು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಪೂಜೆ, ಅರ್ಚನೆ ಮಾಡುವ ವೇಳೆ ತಪ್ಪಿಯೂ ಈ ಐದು ವಸ್ತುಗಳನ್ನು ಬಳಸಬೇಡಿ.

1. ಕೇದಗೆಯ ಹೂವು:

ಶಿವನಿಗೆ ತುಂಬೆ, ಧಾತುರಾ, ಅಪರಾಜಿತಾ, ನಾಗ ಕೇಸರಿ ಮುಂತಾದ ಹೂವುಗಳನ್ನು ಅರ್ಪಿಸಲಾಗುತ್ತದೆ. ಮಹಾಶಿವನಿಗೆ ಬಿಳಿ ಬಣ್ಣದ ಹೂವುಗಳು ಬಹಳ ಪ್ರಿಯ ಆದರೂ ಕೇದಗೆ ಹೂವನ್ನು ಶಿವನ ಆರಾಧನೆಯಲ್ಲಿ ಅರ್ಪಿಸಬಾರದು. ದಂತಕಥೆಯ ಪ್ರಕಾರ ಬ್ರಹ್ಮ ಹೇಳಿನ ಸುಳ್ಳಿನಲ್ಲಿ ಕೇದಗೆ ಹೂವು ಬ್ರಹ್ಮ ದೇವನನ್ನು ಬೆಂಬಲಿಸಿತ್ತಂತೆ ಈ ಕಾರಣದಿಂದ ಶಿವ ಕೇದಗೆ ಹೂವನ್ನು ಶಪಿಸುತ್ತಾನೆ. ಈ ಕಾರಣಕ್ಕಾಗಿ ಶಿವನ ಆರಾಧನೆಯಲ್ಲಿ ಕೇದಗೆ ಹೂವು ಬಳಸುವುದನ್ನು ನಿಷೇಧಿಸಲಾಗಿದೆ.

2. ಶಿವನ ಪೂಜೆಯಲ್ಲಿ ಎಳ್ಳು ಬಳಕೆ ಬೇಡ :

ಶಿವನ ಪೂಜೆಯಲ್ಲಿ ಎಳ್ಳು ಬಳಸುವುದಿಲ್ಲ. ಇದಕ್ಕೆ ಕಾರಣವೆಂದರೆ ಎಳ್ಳು ವಿಷ್ಣುವಿನ ಕಲ್ಮಷದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ ಹಾಗಾಗಿ ವಿಷ್ಣುವಿನ ಪೂಜೆಯ ಸಂದರ್ಭದಲ್ಲಿ ಎಳ್ಳು ಸಮರ್ಪಿಸಲಾಗುತ್ತದೆ.

3. ತುಳಸಿಯನ್ನು ಬಳಸಬೇಡಿ:

ತುಳಸಿಯನ್ನು ಶಿವಲಿಂಗ ಅಥವಾ ಶಿವನ ಆರಾಧನೆಯ ಸಮಯದಲ್ಲಿ ಎಂದಿಗೂ ಬಳಸಬಾರದು. ಇದಕ್ಕೆ ಕಾರಣ ತುಳಸಿಯಾಗಿರುವ ಶಾಪ ತುಳಸಿ ಜಲಂದರ ಎಂಬ ಅಸುರನ ಪತ್ನಿ ವೃಂದಳ ಅಂಶ ತುಳಸಿಯನ್ನು ವಿಷ್ಣು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ ಆದ್ದರಿಂದ ಶಿವನ ಆರಾಧನೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ.

4. ಶಂಖದಿಂದ ನೀರನ್ನು ಅರ್ಪಿಸಬೇಡಿ :

ಶಿವನನ್ನು ಆರಾಧಿಸುವಾಗ ಶಿವಲಿಂಗಕ್ಕೆ ಶಂಖದಿಂದ ನೀರನ್ನು ಎಂದಿಗೂ ಅರ್ಪಿಸಬಾರದು. ಪುರಾಣಗಳ ಪ್ರಕಾರ ಶಿವನು ಶಂಖಚೂಡ್​ ಎಂಬ ರಾಕ್ಷಸನನ್ನು ಕೊಲ್ಲುತ್ತಾನೆ. ಶಂಖ, ಶಂಖಚೂಡನ ಅಂಶ ಎನ್ನಲಾಗಿದೆ ಆದ್ದರಿಂದ ಶಿವನ ಆರಾಧನೆಯಲ್ಲಿ ಶಂಖದಿಂದ ನೀರನ್ನು ಅರ್ಪಿಸುವುದಿಲ್ಲ.

5. ಎಳನೀರಿನ ಅಭಿಷೇಕ ಬೇಡ :
ಶಿವರಾತ್ರಿಯ ದಿನದಂದು ಶಿವಲಿಂಗದ ಮೇಲೆ ಎಳನೀರು ಅರ್ಪಿಸಬಾರದು . ಶಿವ ವಿಗ್ರಹದ ಮೇಲೆ ತೆಂಗಿನಕಾಯಿ ಅರ್ಪಿಸಬಹುದು ಆದರೆ ಎಳನೀರು ಅಲ್ಲ.

RELATED ARTICLES

Related Articles

TRENDING ARTICLES