ಪಾಕ್​​, ಸೌದಿಗೆ ಹೋದ್ರೆ ಭಾರತದ ಕಾನೂನು ಅರಿವಾಗುತ್ತದೆ : ಯು. ಟಿ. ಖಾದರ್

ಮಂಗಳೂರು :  ಮಂಗಳೂರಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ. ಖಾದರ್ ವಿದ್ಯಾರ್ಥಿನಿಯರಿಗೆ ಬುದ್ದಿಮಾತು ಹೇಳಿದ್ದಾರೆ‌‌‌‌‌.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಇದೀಗ ಹಿಜಾಬ್​ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರಿಗೆ ಸ್ಪಷ್ಟ ಸಲಹೆ ನೀಡಿದ್ದಾರೆ. ಹಿಜಾಬ್​​ಗಾಗಿ ಪಟ್ಟು ಹಿಡಿದು ಕುಳಿತಿದ್ದಿರಲ್ಲ, ನೀವೊಮ್ಮೆ ವಿದೇಶಕ್ಕೆ ಹೋಗಿ ನೋಡಿ. ಇಲ್ಲಿ ಹುಲಿ ರೀತಿಯಲ್ಲಿ ಇರುತ್ತೀರಲ್ಲ ಅಲ್ಲಿ ಬೆಕ್ಕಿನ ರೀತಿ ಆಗುತ್ತೀರಿ. ನಮ್ಮ ದೇಶದ ಕಾನೂನಿಗೆ ಗೌರವ ಕೊಡುವುದನ್ನು ಕಲಿತು ಕೊಳ್ಳಿ ಎಂದಿದ್ದಾರೆ.

ಇನ್ನು ನನಗಿಲ್ಲಿ ಅನ್ಯಾಯವಾಗ್ತಿದೆ ಎಂದು ಡಿಸಿ ಹತ್ರ ಎಲ್ಲಾ ಹೋಗುತ್ತಾರೆ. ಕೋರ್ಟ್ ಕೊಟ್ಟಿರುವ ತೀರ್ಪನ್ನು ಮೊದಲು ಗೌರವಿಸಿ. ಸಾವಿರಾರು ಮಕ್ಕಳು ಕಲಿತಾ ಇದ್ದಾರೆ. ಹತ್ತು ಜನಕ್ಕಾಗಿ ಎಲ್ಲರ ಮನಸ್ಸನ್ನು ಯಾಕೆ ಕದಡಬೇಕು. ಆ ಹತ್ತು ಜನ ಕೋರ್ಟ್ ಗೆ ಹೋಗಲಿ. ವಿದೇಶಕ್ಕೆ ಹೋಗಲಿ ಎಂದರು.

ಅಲ್ಲದೇ ಅವರಿಗೆ ಈ ದೇಶದ ಸೌಲಭ್ಯ ಮತ್ತು ಅವಕಾಶಗಳು ಏನು ಎಂಬುದು ಗೊತ್ತಾಗಬೇಕು ಎಂದರೆ ಸೌದಿ ಮತ್ತು ಪಾಕಿಸ್ತಾನಕ್ಕೆ ಹೋಗಲಿ. ಇಲ್ಲಿ ಮಾತನಾಡುವುದಕ್ಕೆ, ಡಿಸಿ ಬಳಿ ಹೋಗುವುದಕ್ಕೆ ಅವಕಾಶವಿದೆ. ಅಲ್ಲಿ ಹೋಗಿ ಮಾತನಾಡಲಿ ನೋಡೋಣಾ ಎಂದು ಆ ಆರು ವಿದ್ಯಾರ್ಥಿನಿಯರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES