ದೇಗುಲದಲ್ಲೇ ‘ಟಿಪ್ಪು’ ಅರ್ಚಕನ ಕೈ ಕತ್ತರಿಸಿದ್ದ : ಕೇಸರಿ ಮುಖಂಡ

ಮಂಡ್ಯ: ಶ್ರೀರಂಗಪಟ್ಟಣದಲ್ಲಿನ ಜಾಮಿಯಾ ಮಸೀದಿಗೆ ಸಂಬಂಧಿಸಿ ಹಲವು ವಿಚಾರಗಳು ಬಹಿರಂಗಗೊಳ್ಳುತ್ತಿದ್ದು, ಅಲ್ಲಿ ಆಂಜನೇಯಸ್ವಾಮಿಯ ದೇವಾಲಯವೇ ಇತ್ತು. ಅದನ್ನು ಹಿಂದೂಗಳಿಗೆ ಬಿಟ್ಟು ಕೊಡುವಂತೆ ಬಿಜೆಪಿ ಮುಖಂಡ ಗೋ.ಮದುಸೂಧನ್ ಒತ್ತಾಯಿಸಿದ್ದಾರೆ. ಅಲ್ಲದೆ, ಮಸೀದಿಗೆ ಸಂಬಂಧಿಸಿದಂತೆ ಅವರು ನೀಡಿರುವ ಹೇಳಿಕೆ ಸಂಚಲನ ಉಂಟು ಮಾಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಈಗ ವಿವಾದದ ಕೇಂದ್ರಬಿಂದುವಾಗಿದೆ. ಮಸೀದಿಗೆ ಸಂಬಂಧಿಸಿ ಒಂದೊಂದೇ ಮಾಹಿತಿ ಹೊರ ಬರಲಾರಂಭಿಸಿದೆ.ಟಿಪ್ಪು ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಈ ನಡುವೆ ಮಂಡ್ಯದಲ್ಲಿ ಬಿಜೆಪಿ ಮುಖಂಡ ಗೋ.ಮಧುಸೂದನ್ ಮಸೀದಿ ಹಿಂದೆ ದೇವಾಲಯವಾಗಿತ್ತು. ಈ ಸಂಬಂಧ ನಾನು 1998ರಲ್ಲಿ ಸದನದಲ್ಲಿ ಮಾತನಾಡಿದ್ದೆ. ಟಿಪ್ಪು ಸುಲ್ತಾನ್ ಬಗ್ಗೆ ನನ್ನ ಹೋರಾಟ ನಡೆದಿತ್ತು. ಹಿಂದೆ ಏನು ನಡೆದಿದ್ಯೋ ಅದು ನಡೆದು ಹೋಗಿದೆ. ಇವತ್ತು ಅದೇ ರೀತಿ ನೋಡಕ್ಕಾಗಲ್ಲ.1991ರಲ್ಲಿ ಪೂಜಾ ವಿಧಾನಗಳ ಬಗ್ಗೆ ಪಿ.ವಿ. ನರಸಿಂಹರಾವ್-ರಾಜೀವ್ ಗಾಂಧಿ ಇದ್ದಾಗ ಕಾನೂನು ತರಲಾಗಿದೆ‌. ಇನ್ನೂರು ವರ್ಷಗಳ ಹಿಂದೆ ನಡೆದ ದೌರ್ಜನ್ಯವನ್ನು ಇವತ್ತಿನ ಕಾನೂನಿಗೆ ಸೇರಿಸಿದ್ರೆ ಕಾಮನ್ ಸೆನ್ಸ್ ಇದ್ಯಾ ಎಂದು ಪ್ರಶ್ನಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಇರೋ ಸ್ಥಳದಲ್ಲಿ ಮಾತ್ರವಷ್ಟೇ ದೇವಾಲಯ ಕೆಡವಿಲ್ಲ. ಬದಲಾಗಿ ಇನ್ನೂ ಹಲವು ಕಡೆ ಇದೇ ರೀತಿ ಮಾಡಲಾಗಿದೆ ಎಂದೇ ಹೇಳಲಾಗ್ತಿದೆ. ಇದಕ್ಕೆ ಪೂರಕವಾಗಿ ಮಂಡ್ಯದಲ್ಲಿ ಮಾತನಾಡಿರೋ ಬಿಜೆಪಿ ಮುಖಂಡ ಗೋ.ಮಧುಸೂದನ್, ಶ್ರೀರಂಗಪಟ್ಟಣದಲ್ಲಿ ಇನ್ನೂ ಹಲವು ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ.ನಿಮಿಷಾಂಬ ದೇವಾಲಯದ ಸಮೀಪದಲ್ಲೇ ಉರ್ದು ಶಾಲೆ ನಡೆಯುತ್ತಿದೆ.ಮುಂಚೆ ಅಲ್ಲಿ ವರದರಾಜೇಸ್ವಾಮಿ ದೇವಸ್ಥಾನವಿತ್ತು.ದೇವಸ್ಥಾನದ ಒಳಗಡೆ ಟಿಪ್ಪು ಅರ್ಚಕನ ಕೈ ಕತ್ತರಿಸಿ ಹಾಕಿದ್ದನಂತೆ.ಬಳಿಕ ಮೂರ್ತಿಯನ್ನು ಒಡೆದು ಹಾಕಿ, ಇವತ್ತು ಅದನ್ನು ‌ಉರ್ದು ಶಾಲೆ ಮಾಡಲಾಗಿದೆ. ಹೀಗೆ ಹಲವು ಕಡೆ ಇದೇ ರೀತಿ ಮಾಡಲಾಗಿದೆ ಎಂದಿದ್ದಾರೆ.

ಮಸೀದಿ ಈ ಹಿಂದೆ ಮೂಡಲಬಾಗಿಲ ಆಂಜನೇಯ ಸ್ವಾಮಿ ದೇವಾಲಯವಾಗಿತ್ತು ಎಂದು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಮುಖಂಡರ ಈ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES