ರಾಜ್ಯಸಭಾ ಚುನಾವಣೆಗೆ ಇನ್ನು ನಾಲ್ಕೇ ನಾಲ್ಕು ದಿನ ಬಾಕಿ

ಬೆಂಗಳೂರು: ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯಸಭೆ ಮೇಲೆ ಕಣ್ಣೀಟ್ಟಿರೋ ಜೆಡಿಎಸ್​ಗೆ ಎದುರಾಗಿದೆ ಆತಂಕ ಶುರುವಾಗಿದೆ.

ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸ್ತಿದೆ ಮೇಲ್ಮನೆ ರಣಕಣದಲ್ಲಿ ಕಾಂಗ್ರೆಸ್​ನ ಒಂದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಜಯ ನಿಶ್ಚಿತವಾಗಿದ್ದು, ಮತ್ತೊಂದು ಸ್ಥಾನಕ್ಕಾಗಿ ಮೂರು ಪಕ್ಷಗಳಿಂದಲೂ ಪೈಪೋಟಿ ನಡೆಸುತ್ತಿದೆ. ರಾಜ್ಯಸಭೆ ಮೇಲೆ ಕಣ್ಣೀಟ್ಟಿರೋ ಜೆಡಿಎಸ್​ಗೆ ಆತಂಕ ಎದುರಾಗಿದ್ದು, ಪ್ರಾದೇಶಿಕ ಪಕ್ಷಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಠಕ್ಕರ್ ನೀಡುತ್ತಿದ್ದಾರೆ.

ಅದಲ್ಲದೇ, 2ನೇ ಅಭ್ಯರ್ಥಿ ಕಣಕ್ಕಿಳಿಸಿ ದಳಪತಿಗಳಿಗೆ ಕಾಂಗ್ರೆಸ್​ ಬಿಗ್ ಶಾಕ್ ನೀಡಿದ್ದು, ನಾನಾ‌ ರಣತಂತ್ರ ಹೆಣೆದ್ರೂ ಜೆಡಿಎಸ್​ಗೆ ಸಿಕ್ಕಿಲ್ಲ ಗೆಲುವಿನ ಖಾತರಿಯಾಗಿದ್ದು, ‘ರಾಜಕೀಯ ಭೀಷ್ಮ’ ದೊಡ್ಡಗೌಡ್ರು ಕೈ ಕಟ್ಟಿ ಕೂತ್ತಿಲ್ಲ. ಕೊನೆ ಕ್ಷಣದಲ್ಲಿ ಏನಾದರೂ ಆಗಬಹುದೆಂಬ ಪ್ರಯತ್ನದಲ್ಲಿದ್ದು, ಮಲ್ಲಿಕಾರ್ಜುನ ಖರ್ಗೆ ಮೂಲಕ ಗೇಮ್ ಪ್ಲ್ಯಾನ್​ ಮಾಡಲಾಗಿದೆ. ಹಾಗೆನೇ ಕೇಂದ್ರ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರೋ ಖರ್ಗೆ ಆದ್ರೆ ಇವರ ರಣತಂತ್ರಕ್ಕೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ.

RELATED ARTICLES

Related Articles

TRENDING ARTICLES