ಹುಬ್ಬಳ್ಳಿ : ನಗರದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಓನರ್ ಗಳಿಗೆ ಅಂಕುಶ ಹಾಕಲು ಪೊಲೀಸರು ತಯಾರಿ ನಡೆಸಿದ್ದಾರೆ ಇತ್ತೀಚಿಗೆ ಸರ್ಕಾರ ನಿಗದಿ ಪಡಿಸಿದ ಸಮಯ ಮೀರಿದರು ಬಾರ್ ಅಂಡ್ ರೆಸ್ಟೋರೆಂಟ್ ಓನರ್ ಗಳು ಸಮಯಕ್ಕೆ ಸರಿಯಾಗಿ ಕ್ಲೋಸ್ ಮಾಡುತ್ತಿಲ್ಲ ಎಂದು ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಗೋಕುಲ ರೋಡ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ತಮ್ಮ ವ್ಯಾಪ್ತಿಯ ಬಾರ್ ಮಾಲೀಕರನ್ನ ಕರೆಸಿ ಸಭೆ ನಡೆಸಿ ಎಚ್ಚೆರಿಕೆ ನೀಡಿದ್ದಾರೆ.
ಗೋಕುಲ ರೋಡ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಕೆಲ ಬಾರ್ ಪಬ್ ಮಾಲೀಕರು ವಿಪರೀತಿ ಸೌಂಡ್ ಹಾಕಿ ಮದುವೆ ಸಮಾರಂಭ ಮಾಡುತ್ತಿದ್ದಾರೆ ಅಲ್ಲದೆ ಒಂದು ಪಬ್ ಅಧಿಕ ಮ್ಯೂಸಿಕ್ ಬಳಸಿ ವ್ಯಾಪಾರ ನಡೆಸುತ್ತಿದ್ದು ಇದಕ್ಕೆ ಕಡಿವಾಣ ಹಾಕೋಕೊಳ್ಳುವಂತೆ ಇನ್ಸ್ ಪೆಕ್ಟರ್ ವಾರ್ನಿಂಗ್ ಮಾಡಿದ್ದಾರೆ, ಸ್ಥಳೀಯ ನಿವಾಸಿ ಒಬ್ಬರು ಫೇಸ್ ನಬುಕ್ ಮೂಲಕ ದೂರು ನೀಡಿರುವ ಹಿನ್ನಲೆ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.
ಬಾರ್ ಗಳನ್ನ ಸಮಯಕ್ಕೆ ಸರಿಯಾಗಿ ಕ್ಲೋಸ್ ಮಾಡಬೇಕು, ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು, ಪಾರ್ಕಿಂಗ್ ಸಮಸ್ಯೆ ಉಂಟಾಗಬಾರರು, ತಂಟೆ ತಕರಾರು ಬಂದಲ್ಲಿ 112 ಪೊಲೀಸರಿಗೆ ಕೂಡಲೇ ಮಾಹಿತಿ ನೀಡಬೇಕು ಉಲ್ಲಂಘನೆ ಮಾಡಿದ್ದಲ್ಲೇ ಮಾಲೀಕರ ಮೇಲೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ,ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಪರವಾನಿಗೆ ಪಡೆಯಬೇಕು ಎಂದು ತಿಳಿಸಿದ್ದಾರೆ


