ಚಿಕ್ಕಮಗಳೂರು : ಕಾಂಗ್ರೆಸ್ಸಿಗರಿಗೆ ಮಾಡಲು ಕೆಲಸವಿಲ್ಲ, ಚಡ್ಡಿ ಸುಟ್ಕೊಂಡು ಇರಲಿ. ನಮ್ಮ ಹಳೇ ಚಡ್ಡಿಗಳೇ ಇದಾವೆ, ಅವುಗಳನ್ನು ಕಳಿಸಿಕೊಡುತ್ತೇವೆ, ಸುಟ್ಕಂಡ್ ಇರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಅದಲ್ಲದೇ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಹೋಗಿದೆ, ಕರ್ನಾಟಕದಲ್ಲೂ ಠೇವಣಿ ಕಳೆದುಕೊಳ್ಳುತ್ತಾರೆ. ದುರಹಂಕಾರ, ವೋಲೈಕೆ ರಾಜಕಾರಣವನ್ನ ರಾಜ್ಯದ ಜನ ಒಪ್ಪಲ್ಲ, ಕ್ಷಮಿಸಲ್ಲ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿಕೆಶಿ-ಸಿದ್ದು ಬಾಯಿ ಬಂದ್ ಆಗಿತ್ತು. ಯಾಕೆಂದರೆ ಬೆಂಕಿ ಇಟ್ಟವರೆಲ್ಲ ಅವರ ಸಹೋದರರು ಎಂದು ವ್ಯಂಗ್ಯವಾಡಿದರು.
ಇನ್ನು, ಪಠ್ಯ ಪುಸ್ತಕದಲ್ಲಿ ಹೆಡ್ಗೇವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಇವರ್ಯಾರು. ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ, ಸರ್ಕಾರ ಒಪ್ಪಿದೆ. ಮಧ್ಯೆದಲ್ಲಿ ನಂದು ಎಲ್ಲಿಡಲಿ ಅಂತಾ ಕೇಳೋಕೆ ಇವರ್ಯಾರು? ಇವರು ಹೇಳಿದ ಹಾಗೆ ಕೇಳೋಕೆ ಆಗುತ್ತಾ…? ಎಂದು ಪ್ರಶ್ನಿಸಿದರು.


