ಮಹಾರಾಷ್ಟ್ರ : ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿರುವ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಇಲಾಖೆ ಹೆಚ್ಚಿನ ಭದ್ರತೆ ನೀಡಿದೆ. ಜೊತೆಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ಪೊಲೀಸರ ತಂಡ ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದು, ಭದ್ರತೆ ಕುರಿತಾಗಿ ಎಲ್ಲ ರೀತಿಯ ಮಾಹಿತಿ ಪಡೆದುಕೊಂಡಿದೆ. ನಿನ್ನೆ ಸಲ್ಮಾನ್ ಖಾನ್ ತಂದೆ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಇದರ ಬೆನ್ನಲ್ಲೇ ಖಾಕಿ ಪಡೆ ಕಾರ್ಯೋನ್ಮುಖವಾಗಿದೆ. ಜೊತೆಗೆ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು ಮಾಡಿಕೊಂಡು, ತನಿಖೆ ಆರಂಭಿಸಲಾಗಿದೆ.
ಚೀಟಿಯಲ್ಲಿ ಏನಿತ್ತು?
ಸಲೀಂ ಖಾನ್ ಅವರ ಭದ್ರತಾ ಸಿಬ್ಬಂದಿಗೆ ಆ ಚೀಟಿ ಸಿಕ್ಕಿತ್ತು. ಅದನ್ನು ಸಲೀಂ ಖಾನ್ ಅವರಿಗೆ ನೀಡಿದರು. ಚೀಟಿಯಲ್ಲಿ ‘’ಮೂಸಾವಾಲಾ ರೀತಿಯಲ್ಲೇ ನಿಮಗೂ ಮಾಡುತ್ತೇವೆ’’ ಎಂದು ಚೀಟಿಯಲ್ಲಿ ಬರೆಯಲಾಗಿತ್ತು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ
ಕಳೆದ ಕೆಲ ದಿನಗಳ ಹಿಂದೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯ್ ಎಂಬುದು ಗೊತ್ತಾಗುತ್ತಿದ್ದಂತೆ ನಟ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
Maharashtra | Actor Salman Khan & his father Salim Khan received a threat letter, today. Bandra Police has filed an FIR against an unknown person & further probe is underway: Mumbai Police
(File pic) pic.twitter.com/wAKZlgHNH2
— ANI (@ANI) June 5, 2022


