ಕೇಕ್‌ನಲ್ಲಿ ತನ್ನದೇ ರೂಪ ರಚಿಸಿದ ಅದ್ಭುತ ಕಲಾವಿದೆ

ಇಂಟರ್‌ನೆಟ್‌ ಎಂಬ ಪ್ರಪಂಚದಲ್ಲಿ ಕೆಲವೊಂದು ಸಲ ಕಾಣಸಿಗುವ ಅದ್ಭುತ ದೃಶ್ಯಗಳು ನಮ್ಮನ್ನು ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತವೆ. ಇದು ಸಾಧ್ಯನಾ?’ ಎಂದು ಬಿಟ್ಟ ಕಣ್ಣು ಬಿಟ್ಟಂತೆ ನೋಡುವಂತೆ ಮಾಡುವ ಸಾಕಷ್ಟು ದೃಶ್ಯಗಳು ನಮಗೆ ಇಂಟರ್‌ನೆಟ್‌ನಲ್ಲಿ ಕಾಣಸಿಗುತ್ತವೆ.

ಅದಲ್ಲದೇ, ಒಂದಷ್ಟು ಕಲಾವಿದರು ತಮ್ಮ ಕೌಶಲ್ಯದ ಮೂಲಕವೇ ನಮ್ಮ ಗಮನ ಸೆಳೆಯುತ್ತಾರೆ. ನಟಾಲಿ ಸೈಡ್ಸರ್ಫ್‌ ತಮ್ಮ ಬೇಕಿಂಗ್ ಕೌಶಲ್ಯದ ಮೂಲಕವೇ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಇಂತಹ ನಟಾಲಿ ಈಗ ತಮ್ಮದೇ ರೂಪವನ್ನು ಕೇಕ್ ಮತ್ತು ಕ್ರೀಮ್‌ನೊಂದಿಗೆ ತಯಾರಿಸಿದ್ದಾರೆ.

ಇನ್ನು, ತಕ್ಷಣ ಇಲ್ಲಿ ಕೇಕ್ ಪ್ರತಿಮೆ ಯಾವುದು ಅಥವಾ ಜೀವಂತ ನಟಾಲಿಯಾ ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕೇ ಸಾಧ್ಯವಿಲ್ಲ. ಅಷ್ಟು ಅದ್ಭುತವಾಗಿದೆ ಈ ಕೇಕ್ ಕಲಾಕೃತಿ. ಸ್ವತಃ ನಟಾಲಿ ಅವರೇ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES