Site icon PowerTV

ಗದಗದಲ್ಲಿ ಪರಿಸರ ದಿನಾಚರಣೆ

ಗದಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗದಗನಲ್ಲಿ ವಾಕ್ ಮೂಲಕ ಮ್ಯಾರಥಾನ್ ಮಾಡಲಾಯಿತು. ಗದಗ ಜಿಲ್ಲಾಡಳಿತ ಭವನದಿಂದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ವರೆಗೆ ರ್ಯಾಲಿ ನಡೆಯಿತು.

ಜಿಲ್ಲಾಧಿಕಾರಿ ಎಮ್.ಸುಂದರೇಶ್ ಬಾಬು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಜಿಲ್ಲಾ ನ್ಯಾಯಾಧೀಶರು, ಜಿ.ಪಂ ಸಿ.ಇ.ಓ, ಉಪ ಅರಣ್ಯ ಸಂರಕ್ಷಣಾಧಿಕಾರಿ, DDPI ಸೇರಿದಂತೆ ಅನೆಕ ಅಧಿಕಾರಿಗಳು, ನಗರದ ಅನೇಕ‌ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಮ್ಮ ಪರಿಸರ ನಮ್ಮ ಹೆಮ್ಮೆ, ಕಪ್ಪಗುಡ್ಡ ರಕ್ಷಣೆ ನಮ್ಮೆಲ್ಲರ ಹೊಣೆ, ಕಾಡು ಬೆಳಸಿ ನಾಡು ಉಳಿಸಿ, ಹಸಿರೆ ಉಸಿರು ಹೀಗೆ ಅನೇಕ ಘೋಷಣೆಗಳೊಂದಿಗೆ ಜನಜಾಗೃತಿ ಮೂಡಿಸಲಾಯಿತು. ಈ ವೇಳೆ ಅನೇಕ ಹಿರಿಯ ಅಧಿಕಾರಿಗಳು ಸಸಿಗಳ ಪಾಲನೆ, ಪೋಷಣೆಯ ದತ್ತು ಪಡೆದರು.

Exit mobile version