Site icon PowerTV

RSS ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ಆರ್.ಎಸ್.ಎಸ್ ಕಳೆದ 75 ವರ್ಷದಿಂದ ಜನಸೇವೆ ಮಾಡುತ್ತಿದೆ.ಆದರೆ, ವಿಪಕ್ಷ ನಾಯಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಸಿಡಿಮಿಡಿಗೊಂಡರು.

ನಗರದಲ್ಲಿಂದು ಆರ್ ಎಸ್ ಎಸ್ ಚಡ್ಡಿ ಸುಡುತ್ತೇಚೆ ಎನ್ನುವ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಉತ್ತಮ ದೇಶಭಕ್ತಿ ಕೆಲಸ‌ ಮಾಡಿದೆ. ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ. ಆದರೆ ಕೆಲವು ಜನರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ಅಲ್ಲದೇ ವಿಪಕ್ಷ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ. ಹೀಗೇ ಮಾಡೇ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕರ್ನಾಟಕವನ್ನು ಕಳೆದುಕೊಳ್ಳಲಿದೆ ಎಂದರು.

ಇನ್ನು ರಾಜ್ಯಸಭೆ ಎಲೆಕ್ಷನ್​​ನಲ್ಲಿ ಕ್ರಾಸ್ ವೊಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, 10 ನೇ ತಾರೀಖಿನವರೆಗೂ ಕಾದು ನೋಡಿ. ಪಠ್ಯ ವಿಚಾರದಲ್ಲು ರಾಜಕಾರಣ ಮಾಡ್ತಿದ್ದಾರೆ. ಅದಕ್ಕೆಲ್ಲವು ನಮ್ಮ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

Exit mobile version