Site icon PowerTV

ಆಶಿಶ್​ ನೆಹ್ರಾ ತಂತ್ರಿವಾಗಿ ಉತ್ತಮ ಕೋಚ್​​ – ಗ್ಯಾರಿ ಕರ್ಸ್ಟನ್​

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್​(IPL 2022) 15ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಬಗ್ಗುಬಡಿದು ಗುಜರಾತ್ ಟೈಟಾನ್ಸ್ (GT) ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೆ ಆಶಿಶ್ ನೆಹ್ರಾ ಅವರ ಬಗ್ಗೆ ಗ್ಯಾರಿ ಕರ್ಸ್ಟನ್‌ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಈ ಗುಜರಾತ್ ಟೈಟಾನ್ಸ್‌ ತಂಡದ ಯಶಸ್ಸಿನ ಹಿಂದೆ ಗ್ಯಾರಿ ಕರ್ಸ್ಟನ್ ಹಾಗೂ ಆಶಿಶ್ ನೆಹ್ರಾ ಅವರ ಶ್ರಮವಿದೆ. ಗ್ಯಾರಿ ಕರ್ಸ್ಟನ್‌ ಅವರು ಮಾತ್ರ ಆಶಿಶ್ ನೆಹ್ರಾ ಅವರ ಕೋಚ್ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಶಿಶ್ ನೆಹ್ರಾ ಯಾವಾಗಲೂ ತಮ್ಮ ತಂಡದ ಆಟಗಾರರನ್ನು ವಿವಿಧ ಆಯ್ಕೆಯ ರೂಪದಲ್ಲಿ ಬಳಸಿಕೊಳ್ಳಲು ಬಯಸುತ್ತಾರೆ. ಐಪಿಎಲ್‌ (IPL) ಟೂರ್ನಿಯಲ್ಲಿ ನಿರ್ದಿಷ್ಟವಾದ ಗೇಮ್ ಪ್ಲಾನ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೇ ಯಾವಾಗಲೂ ಐಪಿಎಲ್ ಪಂದ್ಯಗಳು ಹೊಸ ಸವಾಲುಗಳನ್ನು ಹಾಗೂ ಸಾಧ್ಯಾಸಾಧ್ಯತೆಗಳನ್ನು ಹುಟ್ಟುಹಾಕುತ್ತವೆ. ಹೀಗಾಗಿ ಸಂದರ್ಭಕ್ಕೆ ತಕ್ಕಂತೆ ಗೇಮ್ ಪ್ಲಾನ್ ರೂಪಿಸಬೇಕಾಗುತ್ತದೆ. ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಗೇಮ್ ಪ್ಲಾನ್ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕೋಚ್‌ಗಳಾಗಿ ನಾವು ಆಟಗಾರರು ಕೂಡಾ ಅದೇ ರೀತಿ ಆಲೋಚಿಸುವಂತೆ ಮಾಡಲು ಸಹಾಯ ಮಾಡುತ್ತಿದ್ದೆವು ಎಂದು ಗ್ಯಾರಿ ಕರ್ಸ್ಟನ್‌ ಖ್ಯಾತ ಕ್ರಿಕೆಟ್ ವೆಬ್‌ಸೈಟ್‌ Cricbuzzಗೆ ತಿಳಿಸಿದ್ದಾರೆ.

Exit mobile version