Site icon PowerTV

ಅಕ್ರಮ ವಹಿವಾಟಿಗೆ ಮೂಗುದಾರ ಹಾಕಿದ ಆ್ಯಪಲ್

ಬೆಂಗಳೂರು: ಆ್ಯಪಲ್ ಕಂಪನಿ ಆ್ಯಪ್ ಸ್ಟೋರ್‌ ಪಾಲಿಸಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಕಳೆದ ವರ್ಷ ಒಟ್ಟಾರೆ 1.5 ಬಿಲಿಯನ್ ಡಾಲರ್ ಅಕ್ರಮ ವಹಿವಾಟಿಗೆ ತಡೆಯೊಡ್ಡಿದೆ.

ಐಫೋನ್, ಐಮ್ಯಾಕ್ ಹಾಗೂ ಐಪ್ಯಾಡ್‌ಗಳಿಗೆ ಅಪ್ಲಿಕೇಶನ್‌ಗಳನ್ನು ಒದಗಿಸುವ ಆ್ಯಪ್ ಸ್ಟೋರ್‌, ಗ್ರಾಹಕರ ಮಾಹಿತಿಗೆ ಕನ್ನ ಹಾಕುತ್ತಿದ್ದ 34,500ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನು ಹೊರಗಿಟ್ಟಿದೆ. ಜತೆಗೆ, ಗ್ರಾಹಕರನ್ನು ಹಾದಿ ತಪ್ಪಿಸುವ ಮಾಹಿತಿ ಇರುವ, ನಕಲು ಮಾಡಲಾದ ಮತ್ತು ಸ್ಪಾಮ್ ಹರಡಬಲ್ಲ 1,57,000 ಅಪ್ಲಿಕೇಶನ್‌ಗಳನ್ನು ಮುಲ್ಲಾಜಿಲ್ಲದೆ ಕಿತ್ತುಬಿಸಾಕಿದೆ.

ಗ್ರಾಹಕರ ಖಾಸಗಿತನ ಮತ್ತು ಭದ್ರತೆಯ ಮಾಹಿತಿ ಉಲ್ಲಂಘಿಸಿದ 3,43,000 ಅಪ್ಲಿಕೇಶನ್‌ಗಳನ್ನು ಆ್ಯಪಲ್, ಆ್ಯಪ್‌ ಸ್ಟೋರ್‌ನಿಂದ ಹೊರಬಿದ್ದಿವೆ. ಈ ಕಾರ್ಯದಿಂದಾಗಿ ಆ್ಯಪ್ ಸ್ಟೋರ್ ಮೂಲಕ ನಡೆಯಬಹುದಾಗಿದ್ದ 1.5 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟನ್ನು ಆ್ಯಪಲ್​ ಬ್ರೇಕ್​ ಬಿದ್ದಿದ್ದು, ಗ್ರಾಹಕರಿಗೆ ಸಹಾಯವಾಗಿದೆ.
ಅಕ್ರಮ ಎಸಗಿದ ಖಾತೆಗಳನ್ನು ಆ್ಯಪಲ್ ರದ್ದುಪಡಿಸಿ, ವಹಿವಾಟುಗಳನ್ನು ಶಾಶ್ವತವಾಗಿ ನಿರ್ಬಂಧಿಸಿರುವುದರಿಂದ ಗ್ರಾಹಕರ ಹಣ ದುರುಪಯೋಗವಾಗುವುದು ತಪ್ಪಿದೆ ಎಂದು ಆ್ಯಪಲ್ ಹೇಳಿದೆ.

Exit mobile version