Site icon PowerTV

ಶ್ರೀರಂಗಪಟ್ಟಣ ಮಸೀದಿ ರಸ್ತೆ ಸಂಪೂರ್ಣ ಬಂದ್

ಮಂಡ್ಯ: ಹಿಂದೂಪರ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ ಹಿನ್ನೆಲೆ ಮಸೀದಿ ರಸ್ತೆಯನ್ನು ಸಂಪೂರ್ಣ ಬಂದ್  ಮಾಡಲಾಗಿದೆ.

ನಿನ್ನೆ ಸಂಜೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜಾಮಿಯಾ ಮಸೀದಿ ರಸ್ತೆ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಮಸೀದಿ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಕಬ್ಬಿಣದ ಬ್ಯಾರಿಕೇಡ್ ಪೊಲೀಸರು ಮುಚ್ಚಿದ್ದಾರೆ ಜೊತೆಗೆ ಎಲ್ಲೆಡೆ ಸಿಸಿ ಕ್ಯಾಮೆರಾಗಳನ್ನು
ಮಸೀದಿಗೆ ಅಳವಡಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

ಮಂಡ್ಯ ASP ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ, ನಾಲ್ವರು DYSP, 11 ಮಂದಿ CPI,
34 PSIಗಳು, 200 ಪೊಲೀಸ್ ಸಿಬ್ಬಂದಿ, 4 DAR, 2 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ.

ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ರೂಟ್ ಮಾರ್ಚ್​ಯಿದ್ದು ಶ್ರೀರಂಗಪಟ್ಟಣದ ಬೀದಿಗಳಲ್ಲಿ ಪೊಲೀಸ್ ಪೆರೇಡ್ ಇರುತ್ತದೆ. ರೂಟ್ ಮಾರ್ಚ್ ಮೂಲಕ ಎಚ್ಚರಿಕೆ ಸಂದೇಶವನ್ನು ಪೊಲೀಸ್ ಇಲಾಖೆ ಮೂಲಕ ಜನರಿಗೆ ರವಾನಿಸಲಾಗುತ್ತದೆ ಮತ್ತು ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Exit mobile version