Site icon PowerTV

ಕೋವಿಡ್​​19 : ರಾಜ್ಯದಲ್ಲಿ 1500ಕ್ಕೂ ಹೆಚ್ಚು ಪ್ರಕರಣ ಸಕ್ರಿಯ

ಬೆಂಗಳೂರು : ರಾಷ್ಟ್ರದಲ್ಲಿ ದೈನಂದಿನ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಿನ್ನೆ ಒಂದೇ ದಿನ 4,041 ಮಂದಿಗೆ ಸೋಂಕು ತಗುಲಿದೆ. 10 ಮಂದಿ ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದಾರೆ.

ಇದರೊಂದಿಗೆ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 4,31,68,585ಕ್ಕೆ ತಲುಪಿದೆ. ಮೃತರ ಸಂಖ್ಯೆ ಒಟ್ಟು 5,24,651ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿದ ಮಾಹಿತಿಯಲ್ಲಿ ತಿಳಿಸಿದೆ.

ಒಟ್ಟು 21,177 ಸಕ್ರಿಯ ಕೋವಿಡ್‌ ಪ್ರಕರಣಗಳ ಪೈಕಿ ಕಳೆದ 24 ಗಂಟೆಯಲ್ಲಿ 1,668 ಸಕ್ರಿಯ ಪ್ರಕರಣಗಳು ಸೇರ್ಪಡೆಗೊಂಡಿವೆ.1 ಸಾವಿರ ಕೇಸ್ ಸಕ್ರಿಯ

ಇನ್ನು ಕರ್ನಾಟಕದಲ್ಲಿ ಹೆಚ್ಚಿದ ಕೊರೋನಾ ಪ್ರಕರಣಗಳಿಂದ ರಾಜ್ಯದಲ್ಲಿಸುಮಾರು 1500ಕ್ಕೂ ಹೆಚ್ಚು ಪ್ರಕರಣ ಸಕ್ರಿಯಗೊಂಡಿವೆ. ನಿನ್ನೆ ಒಂದೇ ದಿನ 259 ಹೊಸ ಪ್ರಕರಣಗಳು ದಾಖಲಾಗಿದೆ.

ಕರ್ನಾಟಕ ಸೇರಿ 5 ರಾಜ್ಯಗಳಿಗೆ ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಪತ್ರ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಆರೋಗ್ಯ ಇಲಾಖೆಗಳಿಗೆ ಸೂಚನೆ ಹೆಚ್ಚಿನ ನಿಗಾ ವಹಿಸಲು ಎಚ್ಚರಿಕೆ ನೀಡಿದೆ.

Exit mobile version