Site icon PowerTV

ಜಾಮಿಯಾ ಮಸೀದಿ ವಿವಾದ: ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿ

ಮಂಡ್ಯ: ಜಾಮಿಯಾ ಮಸೀದಿ ವಿವಾದ ವಿಚಾರ ಹಿನ್ನೆಲೆ ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಜೂನ್​​ 4 ರಂದು ಜಾಮಿಯ ಮಸೀದಿ ಚಲೋ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹೋರಾಟಕ್ಕೆ  ಕರೆ ನೀಡಿದ್ದಾರೆ. ಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಇನ್ನು ಮೆರವಣಿಗೆ, ಪ್ರತಿಭಟನೆ ವೇಳೆ 5ಕ್ಕಿಂತ ಹೆಚ್ಚಿನ ಜನ ಸೇರದಿರುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರಿಂದ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.

ಅಷ್ಟೇಅಲ್ಲದೇ ಶ್ರೀರಂಗಪಟ್ಟಣ ಪುರಸಭೆಯ 5 ಕಿಮೀ ವ್ಯಾಪ್ತಿಯಲ್ಲಿ ಜೂ. 3ರ ಸಂಜೆ 6ರಿಂದ ಜೂ.5ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ, ಸಂಗ್ರಹ, ಸಾಗಣೆಗೂ ನಿರ್ಬಂಧ ಹೇರಲಾಗಿದೆ. ಹಾಗೂ ಪ್ರತಿ ಶನಿವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಭಾನುವಾರಕ್ಕೆ ಮುಂದೂಡಿ ಎಂದು ಪುರಸಭೆ ಮುಖ್ಯಾಧಿಕಾರಿ ಆದೇಶ ನೀಡಿದ್ದಾರೆ.

Exit mobile version