Site icon PowerTV

ಖಾಸಗಿ ಬಸ್ ದುರಂತ ಹಿನ್ನೆಲೆ ಶ್ರೀರಾಮುಲು ಪ್ರತಿಕ್ರಿಯೆ

ಬೆಂಗಳೂರು : ಖಾಸಗಿ ಬಸ್​​ಗಳು ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಕಲ್ಬುರ್ಗಿ ಖಾಸಗಿ ಬಸ್ ದುರಂತ ಹಿನ್ನೆಲೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್​​ನಲ್ಲಿ ಸುಮಾರು 35 ಪ್ರಯಾಣಿಕರಿದ್ದರು. ಅದರಲ್ಲಿ ಏಳು ಜನ ಸಜೀವ ಮರಣ ಹೊಂದಿದ್ದಾರೆ. ಹಾಗೂ ಗಂಭೀರವಬಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಇನ್ನು ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿದ್ದೇನೆ. ತನಿಖೆ ನಡೆಯುತ್ತಿದೆ. ತನಿಖಾ ವರದಿ ಪೂರ್ಣಗೊಂಡ ಬಳಿಕ ಏನಾಗಿದೆ ಅಂತಾ ಹೇಳುತ್ತೇನೆ ಎಂದರು.

ಅಷ್ಟೇಅಲ್ಲದೇ ಖಾಸಗಿ ಬಸ್ ಆಗಿರುವ ಕಾರಣ ಪರಿಹಾರದ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಅಪಾಯ ಇರುವ ಕಡೆ ರಸ್ತೆ ಸುರಕ್ಷತಾ ಅನುದಾನವನ್ನು ಬಳಕೆ ಮಾಡುವ ಬಗ್ಗೆ ಕೆಲಸ ಆಗುತ್ತಿದೆ. ಆದರೂ ಇನ್ನೂ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

Exit mobile version