Site icon PowerTV

ರಸ್ತೆಯಲ್ಲಿ ಬಾಳೆ ಗಿಡನೆಟ್ಟು ಆಕ್ರೋಶ

ಉತ್ತರಕನ್ನಡ : ಹೊನ್ನಾವರ ತಾಲೂಕಿನ ಹೊದ್ಕೆಯ ಮಾರುಗೇರಿ ರಸ್ತೆ ಕಳೆದ ಅನೇಕ ವರ್ಷಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಸಹ ಪರದಾಡಬೇಕಿದ್ದು,ರಸ್ತೆ ಹದಗೆಟ್ಟಿರುವುದರಿಂದ ಆಕ್ರೋಶಕೊಳ್ಳಗಾದ ಗ್ರಾಮಸ್ಥರು‌ ರಸ್ತೆಯಲ್ಲಿ ಬಾಳೆ ಗಿಡಗಳನ್ನ ನೆಡುವುದರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಈ ರಸ್ತೆಯು ಹೊನ್ನಾವರ ತಾಲೂಕಿನ ಚಂದಾವರದಿಂದ ಹೊದ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.‌ ರಸ್ತೆಗೆ ಡಾಂಬರೀಕರಣ ಮಾಡಬೇಕು ಅನ್ನೋ ಉದ್ದೇಶದಿಂದ ರಸ್ತೆಗೆ ಜಲ್ಲಿ ಹಾಕಲಾಗಿತ್ತು. ಜಲ್ಲಿ ಹಾಕಿ ನಾಲ್ಕೈದು ವರ್ಷ ಕಳೆದರೂ ಇದುವರೆಗೆ ರಸ್ತೆ ಡಾಂಬರ ಭಾಗ್ಯಕಂಡಿಲ್ಲ.

ಇನ್ನೂ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಹತ್ತಾರು ಬಾರಿ ಶಾಸಕ ಮನೆಗೆ ಬಾಗಿಲಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ. ಆದ್ರೆ ಶಾಸಕರು ಮಾತ್ರೂ ಇನ್ನೂ ಈ ರಸ್ತೆಗೆ ಡಾಂಬರ ಹಾಕೋದಕ್ಕೆ ಮನಸ್ಸು ಮಾಡಿಲ್ಲ. ಹೀಗಾಗಿ ಇದೀಗ ಗ್ರಾಮಸ್ಥರು ರಸ್ತೆಯಲ್ಲಿ ಬಾಳೆ ಗಿಡಗಳನ್ನ ನೆಟ್ಟು ಪ್ರತಿಭಟನೆ ಮಾಡಿದ್ದು, ಆದಷ್ಟು ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡದೆ ಹೋದ್ರೆ ಶಾಸಕ ವಿರುದ್ಧ ಉಗ್ರವಾಗಿರುವ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Exit mobile version