Site icon PowerTV

ಅಪ್ತಾಪ್ತೆಯನ್ನ ಪ್ರೀತಿಸಿದಕ್ಕೆ ಯುವಕನ ದುರಂತ ಅಂತ್ಯ

ವಿಜಯನಗರ : ಅಪ್ತಾಪ್ತೆ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ಯುವಕನೊಬ್ಬನ ಜೀವನ ದುರಂತ ಅಂತ್ಯ ಕಂಡಿದೆ.ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತಿಮ್ಮಲಾಪುರ ಗ್ರಾಮದ ಗಂಗಾಧರ ಮೃತ ದುರ್ದೈವಿ. ಪೋಷಕರ ವಿರೋಧದ ಮಧ್ಯೆ ಮನೆ ಬಿಟ್ಟು ಓಡಿ ಹೋದ ಪ್ರೇಮಿಗಳನ್ನು ಹುಡುಕಿದ ಪೋಷಕರು ಅವರನ್ನು ಬೇರ್ಪಡಿಸಿ ಅವರರವರ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಗಂಗಾಧರ್​ ಮೇಲೆ ಹಲ್ಲೆ ಮಾಡಿದ್ದು, ಅದನ್ನು ರೆಕಾರ್ಡ್​ ಮಾಡಿಕೊಳ್ಳಲಾಗಿದೆ. ಇದಾದ ಕೆಲ ದಿನಗಳಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಇದು ವೈರಲ್ ಆದ್ರೆ ನನ್ನ ಮರ್ಯಾದೆ ಹೋಗುತ್ತೆ ಅಂತ ಅಂಜಿ ಆತ್ಮಹತ್ಯೆ ಮಾಡಿದ್ದಾನೆ ಎಂದು ಕೆಲವರು ಹೇಳಿದ್ರೆ ಇನ್ನು ಪೋಷಕರು ಗಂಗಾಧರ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರೇ ವಿಷ ಕುಡಿಸಿದ್ದಾರೆ ಎಂದು ಆರೋಪಿಸ್ತಿದ್ದಾರೆ.

ಇನ್ನು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾದ್ರೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ ಅನ್ನೋದು ಕುಟುಂಬಸ್ಥರ ವಾದವಾಗಿದೆ. ಹೀಗಾಗಿ ಈ ಬಗ್ಗೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡುತ್ತಿರೋದಾಗಿ ವಿಜಯನಗರ ಎಸ್ಪಿ ಅರುಣ್ ಕುಮಾರ ಮಾಹಿತಿ ನೀಡಿದ್ದಾರೆ.

Exit mobile version