Site icon PowerTV

ಸಾಹಿತ್ಯದಲ್ಲಿ ಕುವೆಂಪು ಎತ್ತರಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಸಿಗಲ್ಲ : ಎಚ್.ಡಿ‌ ದೇವೇಗೌಡ

ತುಮಕೂರು: ಒಂದು ಸಮುದಾಯ ಎಷ್ಟುಮಟ್ಟಿಗೆ ನಡೆದುಕೊಳ್ಳುತ್ತದೆ ಅನ್ನೋದು ಈ ಹಿಂದೆ ಸಾಬೀತಾಗಿ‌ ಹೋಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ‌ ದೇವೇಗೌಡ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯದಲ್ಲಿ ಕುವೆಂಪು ನಷ್ಟು ಎತ್ತರಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಸಿಗಲ್ಲ. ನಾನು ಈವರೆಗೂ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.‌ ಒಂದು ಸಮುದಾಯ ಎಷ್ಟುಮಟ್ಟಿಗೆ ನಡೆದುಕೊಳ್ಳುತ್ತದೆ ಅನ್ನೋದು ಈ ಹಿಂದೆ ಸಾಬೀತಾಗಿ‌ ಹೋಗಿದೆ ಎಂದರು.

ಅದಲ್ಲದೇ, ಕುವೆಂಪು ರಾಷ್ಟ್ರಮಟ್ಟದ ವ್ಯಕ್ತಿ ಎಂದು ಗಮನಿಸಬೇಕಾದ್ರೆ, ಹಿಂದೆ ಏನೇನು ನಡೆಯಿತ್ತು ಅಂತ ಹೇಳಲು ಹೋಗಲ್ಲ. ಅವರು ಶ್ರೀರಾಮಾಯಣ ದರ್ಶನಂ ಬರೆದರು. ಅವರ ಗುರುಗಳಿಗೊಸ್ಕರ ಪುಸ್ತಕ ಬರೆದಿದ್ದೇನೆ ಅಂತ ಹೇಳಿದರು.‌ ಅವರ ಮನಸಿನಲ್ಲಿ ಏನಿತ್ತು ಅನ್ನೋದರ ಬಗ್ಗೆ ಈಗ ಚರ್ಚೆ ಬೇಡ. ಅವರಿಗೆ ಅವಮಾನ ಮಾಡುತ್ತಿದ್ದಾರೆ ಅಂತಾ ಕೇಳಿದಾಗ ನನ್ನ ಮನಸ್ಸಿಗೆ ನೋವಾಗುತ್ತೆ. ನಾನು ಇವತ್ತು ಬೀದಿಯಲ್ಲಿ ನಿಂತು ಹೋರಾಟ ಮಾಡೋ ಶಕ್ತಿಯಿಲ್ಲ ಎಂದು ಹೇಳಿದರು.

Exit mobile version