Site icon PowerTV

ಬಸ್-ಟೆಂಪೋ ಮುಖಾಮುಖಿ ಡಿಕ್ಕಿ : 8 ಮಂದಿ ಸಜೀವದಹನ

ಕಲಬುರಗಿ : ಪಾವಗಡ ಬಸ್​​ ​ದುರಂತ ಮಾಸುವ ಮುನ್ನವೇ ಕಲಬುರುಗಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.

ಕಲಬುರಗಿಯಲ್ಲಿ ಬಸ್ & ಕಂಟೈನರ್​ ನಡುವೆ ಮುಖಾಮುಖಿ ಡಿಕ್ಕಿಯಾದ ತೀವ್ರತೆಗೆ ಆರೆಂಜ್ ಡಿಲಕ್ಸ್ ಬಸ್ ಹೊತ್ತಿ ಉರಿದಿದೆ. ಬಸ್‌ನಲ್ಲಿದ್ದ ಎಂಟರಿಂದ ಒಂಬತ್ತು ಜನ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಒಂದೇ ಕುಟುಂಬದ 30 ಕ್ಕೂ ಅಧಿಕ ಜನ ಹೈದರಾಬಾದ್‌‌ನಿಂದ ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಗೋವಾದಿಂದ ಹೈದರಾಬಾದ್‌ಗೆ ವಾಪಸ್ ಆಗುವಾಗ ಕಲಬುರಗಿ ಜಿಲ್ಲೆ ಕಮಲಾಪುರ ಪಟ್ಟಣ ಮಾರ್ಗವಾಗಿ ಹೋಗುತ್ತಿದ್ದರು.

ಚಾಲಕ ಅತೀ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಪರಿಣಾಮ ಎದುರಿಗೆ ಬಂದ ಟೆಂಪೋಗೆ ಡಿಕ್ಕಿ ಹೊಡೆದ ರಭಸಕ್ಕೆ ಸೇತುವೆ ಮೇಲಿಂದ ಕೆಳಗೆ ಉರಳುಬಿದ್ದಿದೆ. ಈ ವೇಳೆ ಡೀಸೆಲ್‌ ಟ್ಯಾಂಕರ್‌ ಡ್ಯಾಮೇಜ್‌ನಿಂದ ಹೊತ್ತಿ ಉರಿದಿದೆ.

ಗಂಭೀರವಾಗಿ ಗಾಯಗೊಂಡ 12 ಜನರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version