Site icon PowerTV

ಡ್ರಗ್ಸ್​ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್

ಬೆಂಗಳೂರು : ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನ ಬಂಧಿಸಲಾಗಿದೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಕಾರ್ಯಾಚರಣೆ ನಡೆಸಿ ಕ್ಲಿಂಟನ್ ಕೋಸಿ ಎಂಬಾತನನ್ನ ಅರೆಸ್ಟ್ ಮಾಡಲಾಗಿದೆ.

ದೆಹಲಿಯಲ್ಲಿರೋ ನೈಜೀರಿಯಾ ಮೂಲದ ವ್ಯಕ್ತಿಯಿಂದ ಡ್ರಗ್ ಖರೀದಿಸಿ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ..

ಸದ್ಯ ಆರೋಪಿಯನ್ನ ಬಂಧಿಸಿ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಯನ್ನ ನಡೆಸುತ್ತಿದ್ದಾರೆ..ಅಲ್ಲದೇ, ಬಂಧಿತನಿಂದ 45 ಲಕ್ಷ ಮೌಲ್ಯದ 221 ಗ್ರಾಂ 586 MDM ಮಾತ್ರೆ, ಟಯೋಟಾ ಕಾರು, ಎರಡು ಮೊಬೈಲ್​​ಗಳನ್ನ ಜಪ್ತಿ ಮಾಡಲಾಗಿದೆ..

ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version