Site icon PowerTV

ಅನಂತ್​ರಾಜ್​ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​

ಬೆಂಗಳೂರು: ನನ್ನ ಗಂಡನಿಗೆ ನಾನು ಹೋಂ ಅರೆಸ್ಟ್ ಮಾಡಿಲ್ಲ, ನನ್ನ ಗಂಡನನ್ನ ಪ್ರೀತಿಸ್ತಿದ್ದೆ ಎಂದು ರೇಖಾ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 24 ರ ರಾತ್ರಿ ನನಗೆ ವಿಷಯ ಗೊತ್ತಾಯ್ತು. ಏಪ್ರಿಲ್ 7 ರಂದು ನಾನು ಮನೆಗೆ ವಾಪಾಸ್ ಬಂದೆ. ಎಂಆರ್ ಆರ್ ಗೆ ಹೋದಮೇಲೆ ನನ್ನ ಗಂಡನಿಗೆ ಬ್ಲಾಕ್ ಮೇಲ್ ಮೇಸೆಜ್ ಕಳಿಸಿದ್ಳು. ಓರ್ವ ವಿಐಪಿ ಗೆ ಪೋಟೊ,ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದ್ಳು. ಯಾವ ಹೆಂಡತಿ ಪತಿಯನ್ನ ಕೊಲ್ಲುವುದಿಲ್ಲ ಎಂದರು.

ಇನ್ನು, ನನ್ನ ಗಂಡ ಮತ್ತು ಆಕೆಗೆ 2 ವರೆ ಲಕ್ಷ ಟ್ರಾನ್ಸ್ಆಕ್ಷನ್ ಆಗಿದೆ. ನನಗೆ ಅನಂತರಾಜು ಇಲ್ಲದಿದ್ದರೆ, ನಿನಗೂ ಸಿಗಲು ಬಿಡುವುದಿಲ್ಲ ಅಂದಿದ್ದಳು. ಅವಳಿಂದ ನನಗೆ ಟಾರ್ಚರ್ ಇದೆ ಎಂದು ಅಂತಾ ಹೇಳಿದ್ರು. ಹೊಟ್ಟೆ ಉರಿಗೆ ನನ್ನ ಗಂಡನ ಜತೆ ಜಗಳ ಮಾಡಿದ್ದೇನೆ ವಿನಃ ನಾನು ಅವರಿಗೆ ನೋವು ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ನಾವೀಬ್ಬರು ಒಟ್ಟಿಗೆ ಹೊರಗೆ ಹೋಗಿ ಬಂದಿದ್ದೀವಿ. ಮಗಳಿಗೆ ಮೆಡಿಕಲ್ ಓದುವಷ್ಟು ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ಳು ಹಾಗೆನೇ ನನ್ನ ಬಳಿ ಬರದೆ ಹೋದಲ್ಲಿ ಟಾರ್ಚರ್ ನೀಡ್ತಿನಿ ಅಂತಿದ್ದಳು ಎಂದು ಹೇಳಿದ್ದಾರೆ.

Exit mobile version