Site icon PowerTV

ರಾಜ್ಯದಲ್ಲಿ ಮಾನ್ಯತೆ ಹೊಂದಿರೋ ಶಾಲೆಗಳ‌ ಪಟ್ಟಿಗೆ ಮುಂದಾದ ಶಿಕ್ಷಣ ಇಲಾಖೆ

ಬೆಂಗಳೂರು: ಈ ಬಾರಿ ಮೊದಲ ಬಾರಿ ಈ ಪಟ್ಟಿ ರಿಲೀಸ್ ಮಾಡಲಿರೋ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಯಾವುದೇ ಗೊಂದಲ‌ ಉಂಟಾಗದಂತೆ ಕ್ರಮ ವಹಿಸಲು ಪ್ಲ್ಯಾನ್ ಮಾಡಿದೆ.

ಈ ಸಾರಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪಾಸ್ ಆಗಿದ್ದು, ಹೀಗಾಗೀ ಮಾನ್ಯತೆ ಹೊಂದಿದ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿರೋ ಪಿಯು ಬೋರ್ಡ್ ಪ್ರತಿ 32 ಶೈಕ್ಷಣೀಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡಿರೋ ಪಿಯು ಬೋರ್ಡ್. ಯಾವ್ಯಾವ ಶಾಲೆಗಳಿಗೆ ಮಾನ್ಯತೆ ಇದೆ ಅನ್ನೋದ್ರ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ.

ಅದಲ್ಲದೇ, ಈ ಮಾಹಿತಿಯನ್ನ ಆಯಾ ಜಿಲ್ಲಾ‌ ಉಪನಿರ್ದೇಶಕರು ನೀಡುತ್ತಾರೆ. ಇವರ ಮೂಲಕ ಪೋಷಕರು ಮಾನ್ಯತೆ ಇರುವ ಶಾಲೆಗಳ ಮಾಹಿತಿ ಪಡೆದುಕೊಂಡು ದಾಖಲಾತಿ ಮಾಡಬೇಕು. ಆ ಮೂಲಕ ಮಾನ್ಯತೆ ಇಲ್ಲದ ಶಾಲೆಗಳಿಂದ ಆಗುವ ಅನಾಹುತಗಳನ್ನ ತಪ್ಪಿಸಬಹುದು. ಪೋಷಕರಿಗೆ ಫೀಸ್ ಪೀಕಲಾಟದಂತಹ ಸಮಸ್ಯೆಗಳಿಂದ ಪಾರು ಮಾಡಲು ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ .

Exit mobile version