Site icon PowerTV

ಅಧಿಕಾರಿಗಳ ಎಡವಟ್ಟು : ಕೆಲಸ ವಂಚಿತರಾದ ಜನರು

ಕೊಪ್ಪಳ : ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದೇ ಗ್ರಾಮದ 586 ಕುಟುಂಬಗಳು ಜಾಬ್ ಕಾರ್ಡ್ ನಿಂದ ವಂಚಿತರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾ.ಪಂ.ಅಧಿಕಾರಿ ಮತ್ತು ಸಿಬ್ಬಂದಿಯ ಎಡವಟ್ಟಿನಿಂದ ಹಲವಾರು ಕುಟುಂಬಗಳಿಗೆ ವಂಚನೆಯಾಗಿದೆ.

ಜನವರಿಯಲ್ಲಿ ಗ್ರಾಮಸ್ಥರು ನರೇಗಾ ಜಾಬ್ ಕಾರ್ಡ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು, ಹಳೇ ಜಾಬ್ ಕಾರ್ಡ್ ನಲ್ಲಿರುವ ಹೆಸರನ್ನು ಡಿಲೀಟ್ ಮಾಡಿ ಹೊಸ ಜಾಬ್ ಕಾರ್ಡ್ ನೀಡುವಂತೆ ಕೋರಿದ್ರು. ಐದು ತಿಂಗಳು ಕಳೆದರೂ ಗ್ರಾಮಸ್ಥರಿಗೆ ಜಾಬ್ ಕಾರ್ಡ್​​​ ಸಿಕ್ಕಿಲ್ಲಾ. ಇದ್ರಿಂದಾಗಿ ನರೇಗಾ ಕೂಲಿ ಕೆಲಸದಿಂದ ವಂಚಿತರಾಗಿದ್ದು, ಗ್ರಾಮಸ್ಥರು ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಕೂಲಿ ಕೆಲಸ ನೀಡಿ ಇಲ್ಲವೇ ಜಿಲ್ಲಾ ಪಂಚಾಯತ್ ಗೆ ಮುಂದೆ ಪ್ರತಿಭಟನೆ ಮಾಡ್ತಿವಿ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ರು.

Exit mobile version