Site icon PowerTV

ಮುಂಬೈನಲ್ಲಿ ದಿಢೀರ್‌ ಕೊರೋನಾ ಏರಿಕೆ

ಮುಂಬೈ : ಭಾರತದಲ್ಲಿ ಜೂನ್‌ನಲ್ಲಿ 4ನೇ ಕೊವಿಡ್‌ ಅಲೆ ಅಪ್ಪಳಿಸಬಹುದು ಎಂಬ ಮುನ್ಸೂಚನೆ ನಡುವೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೊವಿಡ್‌ ಏಕಾಏಕಿ ಏರಿಕೆಯಾಗಿದೆ.

ಮಂಗಳವಾರ 506ರಷ್ಟು ದಾಖಲಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ನಿನ್ನೆ ದಿಢೀರ್ ಅಂತ 739ಕ್ಕೆ ಏರಿಕೆಯಾಗಿದೆ. ಳೆಗಾಲ ಆರಂಭದ ಈ ಸಂದರ್ಭದಲ್ಲಿ ಕೋವಿಡ್‌ ಹೆಚ್ಚುತ್ತಿದ್ದಂತೆಯೇ ನಗರದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ಹಾಗೂ ಮುಂಬೈ ಮಹಾನಗರ ಪಾಲಿಕೆಗಳು ಸೂಚಿಸಿವೆ. ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಕೊವಿಡ್‌ ಪರೀಕ್ಷೆ ಹೆಚ್ಚಿಸಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮಲಾಡ್‌ನಲ್ಲಿರುವ ಆಸ್ಪತ್ರೆ ಬಳಸಿಕೊಳ್ಳಬೇಕು ಎಂದು ಸೂಚಿಸಿವೆ.

Exit mobile version