Site icon PowerTV

ಶಿಥಿಲಾವಸ್ತೆಯಲ್ಲಿರುವ ಕಟ್ಟಡಗಳ ತೆರವಿಗೆ ಬಿಬಿಎಂಪಿ ಪ್ಲ್ಯಾನ್​

ಬೆಂಗಳೂರು: ಮಳೆಗಾಲಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಇದ್ರಿಂದ ಪ್ರತಿ ವರ್ಷ ಮಳೆ ಬಂದ್ರೆ ಸಾಕು ಒಂದಲ್ಲಾ ಒಂದು ಅನಾಹುತಗಳು ಬೆಂಗಳೂರಿನಲ್ಲಿ ನಡೆಯುತ್ತಲೇ ಇರುತ್ವೆ. ಇದಕ್ಕೆ ಉದಾಹರಣೆ ಅಂದ್ರೆ ಕಳೆದ ವರ್ಷ ಒಂದೇ ತಿಂಗಳಲ್ಲಿ ‌ಮೂರು ಕಟ್ಟಡಗಳು ಕುಸಿದು ಬಿದ್ದಿದ್ದು, ಹತ್ತಾರು ಜನರ ಪ್ರಾಣವನ್ನ ಬಲಿ ಪಡೆದಿದ್ದು, ಆದ್ರೆ ಆ ರೀತಿಯ ದುರ್ಘಟನೆಗಳು ನಡೆದಾಗ ಮಾತ್ರ ಶಿಥಿಲಾವಸ್ತೆಯಲ್ಲಿರುವ ಕಟ್ಟಡಗಳನ್ನ ನೆಲಸಮ ಮಾಡ್ತೇವೆ. ಅದಕ್ಕೆ ಪಟ್ಟಿ ಸಿದ್ದಪಡಿಸಲಾಗಿದೆ. ಆಗ ಮಾಡ್ತೀವಿ ಈಗ ಮಾಡ್ತೀವಿ ಹೀಗೆ ಸಬೂಬ್​ ಹೇಳ್ತಿದ್ದ ಪಾಲಿಕೆ, ಕಟ್ಟಡ ತೆರವು ಮಾಡಿದ ಉದಾಹರಣೆಗಳೇ ಇಲ್ಲ. ಆದ್ರೆ ನೂತನ ಆಯುಕ್ತ ತುಷಾರ್ ಗಿರಿನಾಥ್ ಮಾತ್ರ ಫುಲ್ ಅಲರ್ಟ್​ ಆಗಿದ್ದು, ಪ್ರತಿ ಶನಿವಾರ ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನ ತೆರವು ಮಾಡೋಕೆ ಸೂಚಿಸಿದ್ದಾರೆ.

ಇನ್ನು, ಬಿರುಗಾಳಿ ಸಹಿತ ಮಳೆಯಾದಾಗ ಎಷ್ಟೋ ಮರದ ರೆಂಬೆ ಕೊಂಬೆಗಳು ಧರೆಗುರುಳಿ ಎಷ್ಟೋ ವಾಹನಗಳು ಜಖಂ ಆಗುವುದರ ಜೊತೆಗೆ ಸಾಕಷ್ಟು ಪ್ರಾಣಹಾನಿಯೂ ಸಂಭವಿಸುತ್ತವೆ. ಇದ್ರಿಂದ ಕಟ್ಟಡಗಳ ಜೊತೆ ಟೊಳ್ಳು ಬಿದ್ದಿರುವ ಒಣ ಮರದ ರೆಂಬೆ ಕೊಂಬೆಗಳನ್ನೂ ಕೂಡಾ ತೆರವು ಗೊಳಿಸಿ. ಇದರ ಜೊತೆ ಕಟ್ಟಡ ತೆರವು ಅನ್ನೋದು ದೊಡ್ಡ ಮಾಫಿಯಾ ಆಗ್ತಿದ್ದು ಇದಕ್ಕೆಲ್ಲಾ ಚುನಾಯಿತ ಪ್ರತಿನಿಧಿಗಳಿಲ್ಲದಿರೋದು ಕಾರಣ ಅಂತಾರೆ ಸಾಮಾಜಿಕ ಕಾರ್ಯಕರ್ತರು.

ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡೋದು ನಮ್ಮ ಬಿಬಿಎಂಪಿ ಆಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವಾಡಿಕೆ. ಆದ್ರೆ ಈಗ ಮಳೆಗಾಲಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರೋದ್ರಿಂದ ಈಗಲೇ ಎಚ್ಚೆತ್ತುಕೊಂಡ್ರೆ ಜನರ ಜೀವವು ಉಳಿಯುತ್ತೆ. ಪರಿಹಾರಕ್ಕಾಗಿ ಅಲೆಯೋದು ತಪ್ಪುತ್ತೆ ಅಂತಾರೆ ಸಿಲಿಕಾನ್​ ಸಿಟಿ ಜನ.

Exit mobile version