Site icon PowerTV

ಲವ್ವು-ಲೈಫು ನೆಕ್ಸ್ಟ್ ಡೇ ಕಿಡ್ನ್ಯಾಪ್..!

ಬೆಂಗಳೂರು: ನಾಲ್ಕು ವರ್ಷ ಡೀಪ್ ಲವ್..ನೀ ನನಗೆ, ನಾ ನಿನಗೆ, ಬಿಟ್ಟೋಗ್ಬೇಡ ಪ್ರೇಮಿ ಅಂತ ಇದೇ ಜಲಜಾ ಇದೇ ಗಂಗಾಧರನನ್ನ ಕಾಡಿ ಬೇಡಿಕೊಂಡಿದ್ದಳು. ಕ್ಯಾಬ್ ಚಾಲಕನಾಗಿದ್ದ ಗಂಗಾಧರ ಯುವತಿಗೆ ಹಾರ್ಟ್ ಕೊಟ್ಟೆ, ಇನ್ನು ವೇಯ್ಟ್ ಮಾಡೋದ್ ಬೇಡ ಅಂತ ತಾಳಿ ಹಿಡಿದು ಮೇ 25 ನೇ ತಾರೀಕು ಜಲಜಾಳನ್ನ ಮನೆಯಿಂದ ಕರೆದುಕೊಂಡು ಬಂದಿದ್ದ. ಜಲಜಾ ಕಾಣೆಯಾದ ಹಿನ್ನೆಲೆ ಆಕೆಯ ಪೋಷಕರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದರು. ಅಷ್ಟರ ಒಳಗಾಗಿ ಗಂಗಾಧರ ದೇವಸ್ಥಾನ,ಸಬ್ ರಿಜಿಸ್ಟರ್ ಆಫೀಸ್ ಅಂತ ಮದ್ವೆ ಪ್ರೊಸೀಜರನ್ನ ಮುಗಿಸಿ ಸೈಲೆಂಟಾಗಿ ದಾಬಸ್ ಪೇಟೆಯಿಂದ ಬೆಂಗಳೂರಿನ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ಲೇಔಟ್ ನ ಸಹೋದರಿಯ ಮನೆಗೆ ಬಂದು ಟೆಂಟ್ ಹಾಕಿದ್ದ.

ಮಗಳು ಮನೆ ಬಿಟ್ಟು ಹೋಗಿದ್ದು ಕಾರು-ಬೈಕು ಕೊಡ್ಸಿಲ್ಲ ಅಂತಲ್ಲ. ಲವ್ವು ಡವ್ವು ಹೊಡಿಯೋಕೆ ಅಂತ ತಿಳಿದ ಜಲಜಾಳ ತಂದೆ ದೇವರಾಜು ಸೈಲೆಂಟಾಗಿ ಮಗಳನ್ನ ಹುಡುಕೋಕೆ ಶುರು ಮಾಡಿದ್ದರು. ಗಂಗಾಧರ ತನ್ನ ಮಗಳನ್ನ ಬ್ಯಾಡರಹಳ್ಳಿಯ ಮನೆಯಲ್ಲಿ ಇಟ್ಟಿದ್ದಾನೆ ಅಂತ ಗೊತ್ತು ಮಾಡಿಕೊಂಡ ದೇವರಾಜು, ತಮ್ಮ ತುಂಡೈಕ್ಳ ಟೀಂನೊಂದಿಗೆ ಗಂಗಾಧರ ಜಲಜಾಳಿದ್ದ ಮನೆಗೆ ತಡರಾತ್ರಿ ಬಂದಿದ್ದಾರೆ. ಬ್ಯಾಡರಹಳ್ಳಿ ಠಾಣೆಯಿಂದ ಬಂದಿದ್ದೀವಿ. ಬಾಗ್ಲು ತೆಗೀರಿ ಅಂತ ಲೌಡ್ ವಾಯ್ಸ್‌ನಲ್ಲೇ ಬಾಗಿಲು ತಟ್ಟಿ ಕೂಗ್ತಿದ್ದಂತೆ ಗಂಗಾಧರ ಬಾಗಿಲು ತೆಗೆದಿದ್ದಾನಷ್ಟೇ. ಗಂಗಾಧರನಿಗೆ ಎರಡೇಟು, ಅವರನ್ನ ಮನೆಯಲ್ಲಿಟ್ಟುಕೊಂಡವ್ರಿಗೆ ಎರಡೇಟು ಹಾಕಿ ಜಲಜಾಳನ್ನ ಕರೆದುಕೊಂಡು ಹೋಗಿದ್ದಾರೆ.

ಪ್ರೀತಿಸಿ ಮದ್ವೆಯಾದವಳು ಮತ್ತೆ ವಿಲನ್ ಮಾವನ ಮನೆಗೆ ಹೋದ್ಲಲ್ಲಾ ಅಂತ ಹಲ್ಲು ಕಡೀತಾ ಗಂಗಾಧರ ಇದೀಗ ಹೆಂಡ್ತೀನ ಕೊಡ್ಸಿ ಅಂತ ಬ್ಯಾಡರಹಳ್ಳಿ ಪೊಲೀಸ್ರ ಮೊರೆ ಹೋಗಿದ್ದಾನೆ. ಇದೀಗ ಗಂಗಾಧರನ ಪರಿಸ್ಥಿತಿ ಪ್ರೀತಿಯ ಪಾರಿವಾಳ ಕೈಗೆ ಸಿಕ್ರೂ ಗೂಡಿನಲ್ಲಿಲ್ಲ ಅನ್ನೋ ಹಾಗಾಗಿದೆ.ಈ ಕೊರಗು ಯಾವ ನವ ವಧು-ವರರಿಗೂ ಬರಬಾರ್ದು.

Exit mobile version