Site icon PowerTV

ಲೈವ್ ಶೋನಲ್ಲೇ ಗಾಯಕ ಕೆಕೆ ದುರಂತ ಸಾವು

ಕೋಲ್ಕತ್ತಾ :ಕೆಕೆ ಎಂದೇ ಜನಪ್ರಿಯವಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಗಾಯನ ಜೀವನ  ಅಂತ್ಯಗೊಂಡಿದೆ. ಇಂದು ಕೋಲ್ಕತ್ತಾದ ನಜ್ರುಲ್ ಮಂಚ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಗಾಯಕ ಕೆಕೆ, ಸ್ಟೇಜ್ ಮೇಲೆ ಅಸುನೀಗಿರುವ ದುರಂತ ಘಟನೆ ನಡೆದಿದೆ.

ಕೆಕೆ ನಿಧನಕ್ಕೆ ಸಂಗೀತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗಾಯನ ವೇದಿಕೆಯಲ್ಲೇ ಉಸಿರು ನಿಲ್ಲಿಸಿದ್ದನ್ನು ಅಭಿಮಾನಿಗಳು ಸ್ಮರಿಸಿ ಆಘಾತ ಸಂತಾಪ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾದ ವಿವೇಕಾನಂದ ಕಾಲೇಜಿನ ಕಾರ್ಯಕ್ರಮದ ಭಾಗವಾಗಿ ನಜ್ರುಲ್ ಮಂಚ್‌ನಲ್ಲಿ ಲೈವ್ ಸಂಗೀತ ಸಂಜೆಯಲ್ಲಿ ಕೆಕೆ ಪಾಲ್ಗೊಂಡಿದ್ದರು.

ಗಾಯನದ ನಡುವೆ ಅಸ್ವಸ್ಥರಾಗಿ ಕುಸಿದ ಗಾಯಕ ಕೆಕೆರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ.

ಇನ್ನು ಗಾಯಕ ಮೃತ ಹಿನ್ನೆಲೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Exit mobile version