Site icon PowerTV

ಫಿಲ್ಮಿ ಪವರ್ ಜೊತೆ ಮೇಜರ್ ಜೋಡಿ ಖಾಸ್​ಬಾತ್

ನಾನು ಕನ್ನಡದಲ್ಲಿ ಸಿನಿಮಾ ಮಾಡೋದಾದ್ರೆ ಸುದೀಪ್ ಜೊತೆ ಮಾತ್ರ ಅಂತಾರೆ ದಬಾಂಗ್ ಬೇಬಿ ಸಾಯಿ ಮಂಜ್ರೇಕರ್. ಇತ್ತ ಮನೆ ತಗೊಳೋದಾದ್ರೆ ಬೆಂಗಳೂರಲ್ಲೇ ಎರಡನೇ ಮನೆ ಮಾಡ್ತೀನಿ ಅಂತಾರೆ ಅಡವಿಶೇಶ್. ಅಷ್ಟೇ ಅಲ್ಲ, ಮೇಜರ್ ಪ್ರಮೋಷನ್ಸ್ ವೇಳೆ ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್​ಕ್ಲೂಸಿವ್ ಆಗಿ ಸಾಕಷ್ಟು ವಿಚಾರಗಳನ್ನ ತೆರೆದಿಟ್ಟಿದ್ದಾರೆ ಪ್ಯಾನ್ ಇಂಡಿಯಾ ಸ್ಟಾರ್ಸ್​.

  1. ಫಿಲ್ಮಿ ಪವರ್ ಜೊತೆ ಮೇಜರ್ ಜೋಡಿ ಖಾಸ್​ಬಾತ್
  2. ಕನ್ನಡದಲ್ಲಿ ಕಿಚ್ಚನೊಟ್ಟಿಗೆ ಮಾತ್ರ ನಟಿಸ್ತಾರಾ ಬ್ಯೂಟಿ..?
  3. ಅಡವಿ ಶೇಶ್ ಬೆಂಗಳೂರಲ್ಲೇ ಮಾಡ್ತಾರಂತೆ 2ನೇ ಮನೆ
  4. ಮೇಜರ್ ಜೊತೆ ಕೆಜಿಎಫ್ ಬಗ್ಗೆ ಎಕ್ಸ್​ಕ್ಲೂಸಿವ್ ಟಾಕ್..!

ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣದ, ಅಡವಿ ಶೇಶ್- ಸಾಯಿ ಮಂಜ್ರೇಕರ್ ನಟನೆಯ ಮೇಜರ್ ಸಿನಿಮಾ ಇದೇ ಜೂನ್ 3ಕ್ಕೆ ತೆರೆಗೆ ಬರ್ತಿದೆ. ಅಂದಹಾಗೆ ಇದು 26/11 ತಾಜ್ ಅಟ್ಯಾಕ್​ನಲ್ಲಿ ಜೀವ ತೆತ್ತ ನಮ್ಮ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿ ಕೃಷ್ಣನ್​ರ ಜೀವನಗಾಥೆ. ಆ ಅಟ್ಯಾಕ್​ನ 36 ಗಂಟೆಗಳ ಮುನ್ನ ಆತನ 31 ವರ್ಷದ ಬ್ಯೂಟಿಫುಲ್ ಜರ್ನಿಯನ್ನ ತೆರೆ ಮೇಲೆ ಪರಿಚಯಿಸ್ತಿದ್ದಾರೆ. ಇದು ಒಬ್ಬ ಯೋಧನ ಅಲ್​ಟೋಲ್ಡ್​ ಸ್ಟೋರಿ ಆಗಿದ್ದು, ನೈಜ ಘಟನೆಗಳನ್ನಾಧರಿಸಿ ಚಿತ್ರಿಸಲಾಗಿದೆ.

ಪವರ್ ಟಿವಿಯ ಫಿಲ್ಮಿ ಪವರ್ ಟೀಂ ಜೊತೆ ಮಾತುಕತೆಗೆ ಸಿಕ್ಕಿದ ಮೇಜರ್ ಚಿತ್ರದ ಪೋರಿ ಸಾಯಿ ಮಂಜ್ರೇಕರ್, ದಬಾಂಗ್ ಚಿತ್ರದಲ್ಲಿ ಕಿಚ್ಚನೊಟ್ಟಿಗೆ ತೆರೆಹಂಚಿಕೊಂಡ ಕ್ಷಣ ನೆನೆದರು. ಸುದೀಪ್ ಪುತ್ರಿ ನನಗೆ ಬೆಸ್ಟ್ ಫ್ರೆಂಡ್, ಕನ್ನಡದಲ್ಲಿ ನಟಿಸೋ ಅವಕಾಶ ಬಂದ್ರೆ ಅದು ಅಭಿನಯ ಚಕ್ರವರ್ತಿ ಜೊತೆಗೆ ಮಾತ್ರ ಎಂದರು. ಅಷ್ಟೇ ಅಲ್ಲ, ಕೆಜಿಎಫ್2 ಬಗ್ಗೆ ಥಿಯೇಟರ್​ನಲ್ಲಿ ನೋಡುವಾಗ ಆದ ಅನುಭವಗಳನ್ನು ಹಂಚಿಕೊಂಡ್ರು.

ಇತ್ತ ರೈಟರ್ ಕಮ್ ಆ್ಯಕ್ಟರ್ ಅಡವಿ ಶೇಶ್ ಕೂಡ ಪವರ್ ಟಿವಿ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡ್ತಾ ಬೆಂಗಳೂರಿನ ನಂಟಿನ ಬಗ್ಗೆ ನೆನಪಿನ ಬುತ್ತಿ ಬಿಚ್ಚಿಟ್ರು. ಪವರ್ ವೀಕ್ಷಕರಿಗೆ ನಮಸ್ಕಾರ ಹೇಳ್ತಾ, ಅಪ್ಪು- ಸುದೀಪ್​ ಸರ್​ಗೆ ಫ್ಯಾನ್ಸ್​ ಇದ್ದಂಗೆ ನಾನು ಸಂದೀಪ್ ಅವ್ರ ಫ್ಯಾನ್ ಎಂದರು. ಒರಾಯನ್ ಮಾಲ್​ನಲ್ಲಿ ಇಟಾಲಿಯನ್ ಫುಡ್, ಫ್ಲೈಟ್ ಹತ್ತೋಕೂ ಮುನ್ನ ಬಿಸಿಬೇಳೆ ಬಾತ್ ತಿನ್ನುತ್ತಿದ್ದನ್ನ ನೆನೆದರು, ಎರಡನೇ ಮನೆ ಮಾಡೋದಾದ್ರೆ ಬೆಂಗಳೂರಲ್ಲೇ ಮಾಡ್ತೀನಿ ಅಂತ ಕೆಜಿಎಫ್ ಸಿನಿಮಾ ಹಾಗೂ ಮೇಜರ್ ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

Exit mobile version