Site icon PowerTV

ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿದ ಬ್ರಿಜೇಶ್ ಕಾಳಪ್ಪ

ಬೆಂಗಳೂರು : ಕಾಂಗ್ರೆಸ್‌ ನಾಯಕ, ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಕೆಪಿಸಿಸಿ ವಕ್ತಾರರಾಗಿದ್ದ ಅವರು ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವಕಾಶ ಕೈ ತಪ್ಪಿದ ಹಿನ್ನೆಲೆಯಲ್ಲಿಅಸಮಾಧಾನಗೊಂಡು ಇಂದು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತಂತೆ ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು 1997ರಲ್ಲಿ ಆರಂಭವಾದ ಕಾಂಗ್ರೆಸ್​​ನೊಂದಿಗಿನ ಒಡನಾಟಕ್ಕೆ ಫುಲ್​​​ಸ್ಟಾಪ್​ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಬ್ರಿಜೇಶ್ ಕಾಳಪ್ಪ ಅವರು, ಪಕ್ಷದಲ್ಲಿ ಇಷ್ಟು ವರ್ಷ ನಾನಾ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.ಇ ದೇ ವೇಳೆ ತಮ್ಮನ್ನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ಸಚಿವ ಸ್ಥಾನದೊಂದಿಗೆ ನೇಮಕಗೊಂಡಿದಕ್ಕೆ ಧನ್ಯವಾದ, ಈ ಹಿನ್ನೆಲೆಯಲ್ಲಿ 1997ರಲ್ಲಿ ಆರಂಭವಾದ ಒಡನಾಟ ಕೊನೆಗೊಳಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version