Site icon PowerTV

ಹನಿಟ್ರ್ಯಾಪ್ ಮಾಡೋರು 6 ವರ್ಷ ರಿಲೇಷನ್ ಶಿಪ್​​​ನಲ್ಲಿ ಇರಲ್ಲ: ರೇಖಾ

ಬೆಂಗಳೂರು : ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ನೋವು ತಂದಿದೆ. ನಾನು ಪ್ರಚೋದನೆ ನೀಡಿಲ್ಲ, ಹಾಗೂ ಹನಿಟ್ರ್ಯಾಪ್‌ ಮಾಡಿಲ್ಲ ಎಂದು ಬ್ಯಾಡರಹಳ್ಳಿ ಪೊಲೀಸ್​​ ಠಾಣೆ ಎದುರು ರೇಖಾ ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡ ಅನಂತ್ ರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಪ್ರೇಯಸಿ ರೇಖಾ ಹಾಜರಾಗಿದ್ದು, ಅನಂತರಾಜು ಪತ್ನಿ ಸುಮ ವಿರುದ್ಧ ದೂರು ನೀಡಿದ್ದಾರೆ.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಇಲ್ಲೀಗಲ್​​​ ರೀಲೆಶನ್ ಷಿಪ್​​ನಲ್ಲಿ ಇದ್ದು ತಪ್ಪು ಮಾಡಿದ್ದೀನಿ. ಅದರೆ, ಅನಂತ್ ರಾಜು ಅವರಿಗೆ ನಾನು ಹನಿಟ್ಯ್ರಾಪ್ ಮಾಡಿಲ್ಲ. ನಾನು ಅವರ ಸಾವಿಗೆ ಕಾರಣ ಅಲ್ಲ. ಸುಮಾ ಕೊಟ್ಟ ಟಾರ್ಚರ್​​ಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ನಾನು ಅವರ ವಿರುದ್ದ ದೂರು ನೀಡುತ್ತೇನೆ. ನನಗೆ ನ್ಯಾಯ ಬೇಕು. ನನ್ನಲ್ಲಿರುವ ಎಲ್ಲಾ ಆಡಿಯೋಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಇನ್ನು ಇದೇ ಕೇಸ್ ಏಪ್ರಿಲ್​​ನಲ್ಲಿ ಕೂಡ ಠಾಣೆ ಮೆಟ್ಟಿಲೇರಿತ್ತು. ಆಗ ಬರೆದಿದ್ದ ಡೆತ್ ನೋಟ್ ಅದು, ಬೇಕಿದ್ದರೇ ( FSL ) ಎಫ್ಎಸ್ಎಲ್ ಗೆ ಕಳುಹಿಸಲಿ ಅಲ್ಲದೇ ಈ‌ ಹಿಂದೆ ಕೂಡ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದರು.
ಆಗ ಅದನ್ನ ಬರೆಯಲಾಗಿದೆ. ಇನ್ನು ಬದುಕಿರುವಾಗಲೇ ಡೆತ್ ನೋಟ್ ಇದೆ ಎಂದು ಸುಮಾ ಧಮ್ಕಿ ಹಾಕಿದ್ದರು ಎಂದರು.

ಇನ್ನು ಹನಿಟ್ರ್ಯಾಪ್​​ನಲ್ಲಿರೋರು 6 ವರ್ಷ ರಿಲೇಷನ್ ಷಿಪ್​​ನಲ್ಲಿ ಇರಲ್ಲ. ಬೇಕಿದ್ರೆ ಸಿಬಿಐ ತನಿಖೆ ಆಗಲಿ,ನಾನು ರೆಡಿ ಇದ್ದೇನೆ. ಫೇಸ್ ಬುಕ್ ಮೂಲಕ ಅನಂತರಾಜು ಪರಿಚಯ ಆಗಿದ್ರು ಮಾರ್ಚ್ 22 ರ ರಾತ್ರಿ‌ 8 ಗಂಟೆಗೆ ನಮ್ಮ ಸಂಬಂಧ ಸುಮಾಗೆ ವಿಷಯ ಗೊತ್ತಾಗಿದೆ. ಅಂದಿನಿಂದ ಅವರನ್ನು ಮನೆಯಿಂದ ಹೊರಗೆ ಬಿಡಲಿಲ್ಲ. ಸುಮಾ ಪ್ರಚೋದನೆಯಿಂದ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ,ನನ್ನ ಮಗಳ ಮಾನ ಮಾರ್ಯಾದೆ ಕಿತ್ತುಕೊಂಡರು, ಜೊತೆಗೆ ಅನಂತರಾಜು ಅವರು ಪ್ರಾಣವನ್ನೂ ಕಿತ್ತುಕೊಂಡಿದ್ದಾರೆ ಎಂದು ಕಿಡಿಕಾಡಿದರು.

Exit mobile version