Site icon PowerTV

KGF ಅರ್ಚನಾ, ಬಸ್ರೂರು ‘ಕ್ಷೇತ್ರಪತಿ’ ಬೆನ್ನಿಗೆ ಡಾಲಿ

ಡಾರ್ಲಿಂಗ್ ಪ್ರಭಾಸ್​ರ ಛತ್ರಪತಿ ಹೆಸ್ರು ಕೇಳಿರ್ತೀರಾ ಅಥ್ವಾ ನೋಡಿರ್ತೀರಾ. ಆದ್ರೆ ನಮ್ಮ ಸ್ಯಾಂಡಲ್​ವುಡ್ ಅಂಗಳದಲ್ಲಿ ತಲೆ ಎತ್ತುತ್ತಿರೋ ಕ್ಷೇತ್ರಪತಿ ಗೊತ್ತಿರಲಿಕ್ಕಿಲ್ಲ. ಕೆಜಿಎಫ್ ಕಲಾವಿದರು, ತಂತ್ರಜ್ಞರ ಜೊತೆ ಗುಳ್ಟು ನವೀನ್ ಎಕ್ಸ್​ಪೆರಿಮೆಂಟ್​ಗೆ ಡಾಲಿ ಧನಂಜಯ ಸಾಥ್ ನೀಡಿದ್ದಾರೆ.

ಕಣ್ಣಲ್ಲಿರೋ ನೋವು, ಹತಾಶೆ, ಸಂಕಟ, ಕಿಡಿ, ರೋಷ ಎಲ್ಲವೂ ಒಬ್ನಲ್ಲೇ ಸುಟ್ಟು, ಬೆಂದು, ಹೋರಾಟದ ಜ್ವಾಲಾಮುಖಿಯಾಗಿ ಸಿಡಿದ್ರೆ, ಆ ಒಬ್ಬ, ಪ್ರತಿಯೊಬ್ಬನ ಪ್ರತಿರೂಪ ಆಗ್ತಾನೆ. ಅವನೇ ಕ್ಷೇತ್ರಪತಿ. ಯೆಸ್. ಹೀಗೊಂದು ಪವರ್​ಫುಲ್ ಮಾಸ್ ವಿತ್ ಎಮೋಷನಲ್ ಡೈಲಾಗ್​ನಿಂದ ಕ್ಷೇತ್ರಪತಿ ಅನ್ನೋ ಹೊಸ ಸಿನಿಮಾದ ಫಸ್ಟ್ ಲುಕ್ ಲಾಂಚ್ ಆಗಿ ಸಖತ್ ಸದ್ದು ಮಾಡ್ತಿದೆ.

ಸಂಸ್ಕೃತದಲ್ಲಿ ಕ್ಷೇತ್ರಪತಿ ಅಂದ್ರೆ ರೈತ ಎಂದರ್ಥ. ರೈತನನ್ನ ದೇಶದ ಬೆನ್ನೆಲುಬು, ಅನ್ನದಾತ ಅಂತೆಲ್ಲಾ ಕರೀತಾರೆ. ಆದ್ರೆ ಆತನಲ್ಲಿರೋ ನೋವು ಮಾತ್ರ ಎಷ್ಟೋ ಮಂದಿಗೆ ಗೊತ್ತಿಲ್ಲ. ಆತನ ಹಕ್ಕುಗಳಿಗಾಗಿ ಇಂದಿಗೂ ಹೋರಾಡ್ತಾನೇ ಇದ್ದಾನೆ. ಸದ್ಯ ರೈತರ ಹಕ್ಕುಗಳ ಕುರಿತಾದ ಈ ಸಿನಿಮಾ ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಬ್ಯಾಕ್​ಡ್ರಾಪ್​ನಲ್ಲಿ ತಯಾರಾಗಿದೆ. ಶ್ರೀಕಾಂತ್ ಕಟಗಿ ನಿರ್ದೇಶನದ ಈ ಸಿನಿಮಾದಲ್ಲಿ ಗುಳ್ಟು ಖ್ಯಾತಿಯ ನವೀನ್ ಶಂಕರ್ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ.

ಚಿತ್ರದ ಫಸ್ಟ್ ಲುಕ್​ನ ನಟರಾಕ್ಷಸ ಡಾಲಿ ಧನಂಜಯ ಲಾಂಚ್ ಮಾಡಿ, ಬಸವ ಪಾತ್ರದಾರಿ ನವೀನ್​ ಬಗ್ಗೆ ಹಾಡಿ ಹೊಗಳಿದ್ರು. ಬಸವಣ್ಣನ ರೀತಿ ಕ್ರಾಂತಿಯ ಕಿಡಿ ಹೊತ್ತಿಸಲಿರೋ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅದಕ್ಕೆ ಡೈರೆಕ್ಟರ್ ಸಿಂಪಲ್ ಸುನಿ ಕೂಡ ಸಾಥ್ ನೀಡಿದ್ರು.

ವಿಶೇಷ ಅಂದ್ರೆ ಈ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್ ಕಮಪೋಸ್ ಮಾಡಿದ್ದಾರೆ. ಇನ್ನು ರಾಕಿಭಾಯ್ ತಾಯಿ ಪಾತ್ರ ಪೋಷಿಸಿದ್ದ ಅದ್ಭುತ ಕಲಾವಿದೆ ಅರ್ಚನಾ ಜೋಯಿಸ್ ಮುಖ್ಯಭೂಮಿಕೆಯಲ್ಲಿರೋದು ಇಂಟರೆಸ್ಟಿಂಗ್. ಅಂದಹಾಗೆ ಡಾಲಿ ಹಾಗೂ ನವೀನ್ ಹಳೆಯ ಸ್ನೇಹಿತರು. ಸದ್ಯ ಹೊಯ್ಸಳ ಅನ್ನೋ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸ್ತಿರೋದನ್ನ ಸ್ವತಃ ಧನಂಜಯ ಅವ್ರೇ ವೇದಿಕೆ ಮೇಲೆ ರಿವೀಲ್ ಮಾಡಿದ್ರು.

ಒಟ್ಟಾರೆ ಛತ್ರಪತಿ ಸಿನಿಮಾ ರೇಂಜ್​ಗೆ ಕ್ಷೇತ್ರಪತಿ ಕೂಡ ಸದ್ದು ಮಾಡಲಿ, ಮೋಸ್ಟ್ ಪ್ಯಾಷನೇಟ್ ಟೀಂಗೆ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

Exit mobile version