Site icon PowerTV

ಕೋಡಿಹಳ್ಳಿ ಬಂಧನಕ್ಕೆ ರೈತರ ಆಗ್ರಹ

ಚಿತ್ರದುರ್ಗ : ಪವರ್​​​ ಟಿವಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​​ ಮುಖವಾಡ ಬಯಲು ಮಾಡಿದ್ದು, ಇದೀಗ ಚಿತ್ರದುರ್ಗದಲ್ಲಿ ಕೋಡಿಹಳ್ಳಿ ಡೀಲ್ ಪ್ರಕರಣ ವೀರೋದಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಮಹಾ ವಂಚಕ ರೈತ ಮುಖಂಡನ ನೀಚ ಕೆಲಸದ ಬಗ್ಗೆ ವರದಿ ಮಾಡಿದ ಪವರ್ ಟಿವಿಗೆ ರೈತ ಮುಖಂಡ ಈಚಗಟ್ಟಿ ಸಿದ್ದ ವೀರಪ್ಪ ಅಭಿನಂದನೆ ಸಲ್ಲಿಸಿದ್ರು. ಚಂದ್ರಶೇಖರ್ ಅಣಕು ಶವ ಯಾತ್ರೆ ಮಾಡಿದ್ದು, ಭಾವಚಿತ್ರಕ್ಕೆ ಚಪ್ಪಲಿ, ಶೂಗಳ ಹಾರ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದ್ರು. ಚಂದ್ರಶೇಖರ್ ಆದಾಯ ಮೂಲದ ಬಗ್ಗೆ CBI ತನಿಖೆ ನಡೆಸಿ,ರೈತರ ಹೆಸರಿನಲ್ಲಿ ನೀಚ ಕೆಲಸ ಮಾಡಿದವರನ್ನು ಈ ಕೂಡಲೆ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಸಿದ್ದಾರೆ.

Exit mobile version