Site icon PowerTV

ಅನಂತರಾಜು ಗೆಳತಿ ಚಾಟಿಂಗ್ ವೈರಲ್

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರಕ್ಕಿದ್ದು, ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ.

ಅನಂತರಾಜು ಗೆಳತಿ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ. ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನು ಅವನ ಹೆಂಡ್ತಿಗೆ ಕಳುಹಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಅಶ್ಲೀಲವಾಗಿವೆ ಆ ವೀಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜು ಮೇ 15ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟಲ್ಮೆಂಟ್ ಮಾಡಿಕೊಂಡು ಅನಂತರಾಜು ನೆಮ್ಮದಿಯಾಗಿರಲಿ ಎಂದು ಅನಂತರಾಜು ಗೆಳತಿ ಚಾಟಿಂಗ್ ಮಾಡಿದ್ದಳು.

Exit mobile version