Site icon PowerTV

ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಹೆಚ್ಚಳ

ಕೋಲಾರ : ಟೊಮೆಟೋ ಮಾರುಕಟ್ಟೆಗೆ ಪ್ರತಿ ಮೇ, ಜೂನ್ ತಿಂಗಳಿನಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಅವಕ ಬರುತ್ತಿದ್ದ ಕಾರಣ ಬೆಲೆಯು ಹೆಚ್ಚಾಗಿ ಇರುತ್ತಿರಲಿಲ್ಲ. ಆದ್ರೆ, ಈ ಬಾರಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯದಿರುವ ಕಾರಣ ಹಾಗೂ ಮಳೆಯಿಂದಾಗಿಯೂ ಪೂರೈಕೆ ಪ್ರಮಾಣ ತೀರಾ ಕಡಿಮೆಯಾಗಿದೆ. ಪರಿಣಾಮ ಉತ್ತಮ ಬೆಲೆ ಬಂದಿದ್ದು, ಸದ್ಯ ಬೆಳೆಗಾರರು ಸಂತಸಗೊಂಡಿದ್ದಾರೆ.

ಕಳೆದ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಉತ್ಪಾದನಾ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೆ ಬೇರೆ ಭಾಗದಲ್ಲಿಯೂ ಹೆಚ್ಚಾಗಿ ಟೊಮೆಟೊ ಬೆಳೆದಿಲ್ಲ. ಇದ್ರಿಂದಾಗಿ ವರ್ತಕರು ಅನಿವಾರ್ಯವಾಗಿ ನಾಸಿಕ್‍ನಿಂದ ಟೊಮೆಟೊ ತರಿಸಿಕೊಂಡಿದ್ದಾರೆ.

ಒಟ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಟೊಮೆಟೋ ಅವಕ ಕಡಿಮೆಯಾಗಿರುವುದು, ಈ ಸಮಯಕ್ಕೆ ಬೆಳೆ ಹಾಕುತ್ತಿದ್ದ ರೈತರು ನಮ್ಮದೂ ಬೆಳೆ ಇರಬೇಕಿತ್ತು ಅಂತಿದ್ದಾರೆ.

Exit mobile version