Site icon PowerTV

ಆರ್​.ಡಿ ಪಾಟೀಲ್ ಮತ್ತೆ ಸಿಐಡಿ ವಶಕ್ಕೆ

ಕಲಬುರಗಿ : PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ರುದ್ರೆಗೌಡ ಪಾಟೀಲ್​ನನ್ನು CID ಮತ್ತೆ ತನ್ನ ವಶಕ್ಕೆ ಪಡೆದಿದೆ.

ನಿನ್ನೆಯಿಂದ ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ಪಡೆದಿರೋ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರುದ್ರೆಗೌಡ ಪಾಟೀಲ್ ವಿಚಾರಣೆಯಿಂದ ಇನ್ನು ಕೆಲವರ ಹೆಸರು ಬಯಲಾಗುವ ಸಾಧ್ಯತೆ ಇದೆ. ಏಪ್ರಿಲ್ 23 ರಂದು CID ಅಧಿಕಾರಿಗಳು ರುದ್ರಗೌಡ ಪಾಟೀಲ್‌ನನ್ನು ಬಂಧಿಸಿದ್ದರು.

ಇನ್ನು MES ಕಾಲೇಜು ಪರೀಕ್ಷಾ ಕೇಂದ್ರ ಅಕ್ರಮ ಕುರಿತಂತೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ತನಿಖೆ ಕೈಗೊಂಡ ಸಿಐಡಿ ತಂಡ ಕಲಬುರಗಿಯ ಸಿಐಡಿ ಕಚೇರಿಯಲ್ಲಿ ಆರ್​.ಡಿ ಪಾಟೀಲ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿದೆ. ಪರೀಕ್ಷೆ ಅಕ್ರಮದಲ್ಲಿ ಇನ್ನಷ್ಟು ಅಧಿಕಾರಿಗಳು, ಮಧ್ಯವರ್ತಿಗಳು, ಅಭ್ಯರ್ಥಿಗಳ ಬಂಧನ ಸಾಧ್ಯತೆ ಇದೆ.

Exit mobile version