Site icon PowerTV

‘JDS ಹಿತ ಶತ್ರುಗಳಿಂದ ಕಾಂಗ್ರೆಸ್​​​ಗೆ ಲಾಭ ಆಗಲ್ಲ’ : ಹೆಚ್​ಡಿಕೆ

ಮೈಸೂರು: ಪರಿಷತ್ ಚುನಾವಣೆಯಲ್ಲಿ JDS ಹಿತ ಶತ್ರುಗಳಿಂದ ತಮಗೆ ಲಾಭ ಆಗುತ್ತೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಅದ್ಯಾವುದು ಈಗ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ನಿನ್ನೆ ಸಿದ್ದರಾಮಯ್ಯ ಕೇಳಿದ್ದಾರೆ. ತಮ್ಮ ಕೊಡುಗೆ ಏನು‌ ಎಂದು ಅವರು ಹೇಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಪ್ರಶ್ನೆ ಮಾಡಿದ್ರು. 200 ಕುಟುಂಬಗಳನ್ನು ಅನಾಥವಾಗಿ ಮಾಡಿದ್ದು ಮತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು ಅವರ ಕೊಡುಗೆ ಎಂದು ಸಿದ್ದು ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನಾನು ಮಂಡ್ಯವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ. ಆದರೆ ಅಷ್ಟರಲ್ಲಿ ನೀವು ಸರ್ಕಾರವನ್ನು ತೆಗೆದಿರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version