Site icon PowerTV

ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ

ಮೈಸೂರು: ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿದ್ದು, ಕುಸುದು ಬಿದ್ದಂತೆ ನಟಿಸಿ ಲವರ್‌ನನ್ನೇ ಮದುವೆಯಾಗುತ್ತೇನೆಂದ ಘಟನೆ ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕ ಮಾಡಿದ್ದು, ಸಿಂಚನ ಜೊತೆ ಹೆಚ್.ಡಿ ಕೋಟೆ ತಾಲ್ಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು . ಸುಣ್ಣದಕೇರಿಯಲ್ಲೇ ಪಕ್ಕದ ಮನೆಯವನೊಂದಿಗೆ ಸಿಂಚನ ಲವ್ವಿಡವ್ವಿ ಇದ್ದು, ಸಿಂಚನ ಪ್ರಿಯಕರನಿಂದ ವರನಿಗೆ ಮದುವೆಯಾಗದಂತೆ ಮೆಸೇಜ್ ಬಂದಿದೆ.

ಇನ್ನು, ಮಸೇಜ್‌ಗೂ ನನಗೂ ಸಂಬಂಧವಿಲ್ಲವೆಂದು ಮದುವೆಯಾಗುತ್ತಿದ್ದ ಸಿಂಚನ. ತಾಳಿ ಕಟ್ಟುವ ವೇಳೆ ಮದುವೆಗೆ ನೋ ಎಂದಿದ್ದಾಳೆ. ವರನ ಪೋಷಕರಿಂದ ವಧುವಿಗೆ ಛೀಮಾರಿ ಹಾಕಿದ್ದು, ಮದುವೆಗಾಗಿ ವರನ ಪೋಷಕರು 5 ಲಕ್ಷ ಹಣ ಖರ್ಚು ಮಾಡಿದ್ದಾರೆ. ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ಲಕ್ಷ ಖರ್ಚು ಮಾಡಿದ್ದ ವರನ ಕುಟುಂಬ ಮದುವೆಯಾಗಲ್ಲವೆಂದು ಹಠ ಹಿಡಿದ ವಧುವನ್ನ ಪೊಲೀಸರು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

Exit mobile version