Site icon PowerTV

ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

ಪೊರ್ಕಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಬ್ಯೂಟಿ ಪ್ರಣಿತಾ ಸುಭಾಷ್ ನಂತರ ಸಾಲು ಸಾಲು ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ರು. ಬಳಿಕ ತೆಲುಗು, ತಮಿಳು, ಮತ್ತು ಬಾಲಿವುಡ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡ್ರು. ಪ್ರಣಿತಾಗೆ ಡಿಮ್ಯಾಂಡ್ ಇರೋವಾಗ್ಲೆ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ರಾಜ್ ಹಸೆಮಣೆ ಏರಿದ್ದರು.

ಇದೀಗ ತಾಯ್ತನದ ಖುಷಿಯನ್ನ ಸವಿಯುತ್ತಿದ್ದಾರೆ. ಸಂಭ್ರಮದ ಸೀಮಂತ ಶಾಸ್ತ್ರದ ನಂತರ ಪತಿಯ ಜತೆ ರೊಮ್ಯಾಂಟಿಕ್ ಆಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಹಳದಿ ಸೀರೆಯುಟ್ಟು ಮಿರ ಮಿರ ಅಂತಾ ಮಿಂಚುತ್ತಾ ಸೀಮಂತ ಶಾಸ್ತ್ರದಲ್ಲಿ ಗಮನ ಸೆಳೆದಿದ್ದರು.

ಅದಲ್ಲದೇ, ಈಗ ಪತಿ ನಿತಿನ್ ಪ್ರಣಿತಾಗೆ ರೊಮ್ಯಾಂಟಿಕ್ ಕಿಸ್ ಮಾಡುತ್ತಾ ಇರೋ ಬೇಬಿ ಬಂಪ್ ಫೋಟೋಶೂಟ್ ವೈರಲ್ ಆಗಿದೆ. ಚೆಂದದ ಲಾಂಗ್ ಗೌನ್‌ನಲ್ಲಿ ಸಖತ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ನಟಿಯ ಬೇಬಿ ಬಂಪ್ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Exit mobile version