Site icon PowerTV

ಬಿಜೆಪಿಯವರು ಗೂಡ್ಸೆ ಹಿಂದುತ್ವದವರು : ಕೆ.ಎನ್.ರಾಜಣ್ಣ

ತುಮಕೂರು: ಕಾಂಗ್ರೆಸ್ಸಿಗರು ನಾವು ನಿಜವಾದ ಹಿಂದೂಗಳು ಬಿಜೆಪಿಯವರು ಗೂಡ್ಸೆ ಹಿಂದುತ್ವದವರು ಎಂದು ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ ಗಂಭೀರ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್, ಹಲಾಲ್, ಆಜಾನ್ ಎಲ್ಲವೂ ಬಿಜೆಪಿಯವರೇ ಸೃಷ್ಟಿಸಿದ್ದು, ಕಾಂಗ್ರೆಸ್​ನಲ್ಲಿ ನಾವಿದ್ದೇವೆ ನಾವೇನೂ ಹಿಂದೂಗಳಲ್ವಾ..? ನಮ್ಮ ಹಿಂದುತ್ವ ಮಹಾತ್ಮ ಗಾಂಧಿಯವರ ಹಿಂದುತ್ವ ಬಿಜೆಪಿಯವರು ಗೂಡ್ಸೆ ಹಿಂದುತ್ವ ಪ್ರತಿಪಾದಿಸ್ತಾರೆ ಎಂದು ಹೇಳಿದರು.

ಇನ್ನು, ಅವರ ಹಿಂದುತ್ವಕ್ಕೆ ಯಾರು ಜನ ಮನ್ನಣೆ ಕೊಡೋದಿಲ್ಲ. ಅಲ್ಪಸಂಖ್ಯಾತರಿಂದ ಹಿಡಿದು ಎಲ್ಲಾ ಬಡವರು ಕಾಂಗ್ರೆಸ್ ಬೆಂಬಲಿಸ್ತಾರೆ. ಹಿಂದಿನಿಂದಲೂ ಬೆಂಬಲಿಸಿದ್ದಾರೆ ಮುಂದೆಯೂ ಬೆಂಬಲಿಸ್ತಾರೆ ಎಂದು ತುಮಕೂರಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ.

Exit mobile version