Site icon PowerTV

ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ : ಸಲೀಂ ಅಹಮದ್

ತುಮಕೂರು: ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ ಎಸ್.ಆರ್.ಪಾಟೀಲ್ ತೆಗೆದು ನೇಮಕ ಮಾಡುವಂತೆ ಒತ್ತಾಯಿಸಿದ್ರು ಎಂದು ತುಮಕೂರಲ್ಲಿ ಸಲೀಂ ಅಹಮದ್ ಸ್ಪೋಟಕ ಮಾಹಿತಿ ನೀಡಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್​ನಿಂದ ಎರಡು ಸಲ ಎಂಎಲ್ಸಿ ಕೊಟ್ಟಿದ್ವಿ. ಪ್ಲಾನಿಂಗ್ ಕಮೀಷನ್ ಉಪಾಧ್ಯಕ್ಷ ಮಾಡಿದ್ವಿ. ಸಿಟ್ಟಿಂಗ್ ಎಂಎಲ್ ಎ ಸಂಗಮೇಶ್ ತೆಗೆದು ಟಿಕೇಟ್ ಕೊಟ್ಟಿದ್ವಿ. ಅವರ ಬೇಡಿಕೆ ಎಸ್.ಆರ್.ಪಾಟೀಲ್ ತೆಗೆದು ನಮ್ಮನ್ನ ನೇಮಕ ಮಾಡಬೇಕು ಎಂದರು.

ಇನ್ನು, ನೇಮಕ ಮಾಡುವಂತೆ ಸುರ್ಜೆವಾಲಾಗೆ ಬೇಡಿಕೆ ಇಟ್ಟಿದ್ರು ಅದಕ್ಕೆ ಎಐಸಿಸಿ ಒಪ್ಪಲಿಲ್ಲ ಕೆಲಸ ಮಾಡಿಕೊಂಡು ಹೋಗಿ ಅಂತ ಹೇಳಿದ್ರು ಅದಕ್ಕೆ ಒಪ್ಪಲಿಲ್ಲ. ಎರಡು ವರ್ಷದಿಂದ ಯಾವುದೇ ಕಾರ್ಯಕ್ರಮಕ್ಕೆ ಬರಲಿಲ್ಲ. ಹಾನಗಲ್ ನಾನು ಉಸ್ತುವಾರಿ ಯಾಗಿದ್ದೆ ಅವರು ಒಂದು ದಿನ ಬರಲಿಲ್ಲ. 99% ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಸಿಂದಗಿ, ಎಂಎಲ್ ಸಿಗೂ ಅವರು ಬರಲಿಲ್ಲಾ ಅಲ್ಲೂ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ಬೆಂಬಲ ನೀಡಿದ್ರು. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಮೇಲೆ, ಸಿದ್ದಾಂತದ ಮೇಲೆ ಪಕ್ಷಕ್ಕೆ ಓಟ್ ಹಾಕ್ತಾರೆ. ಜನ ನೋಡಿ ಮುಖಂಡರನ್ನ ನೋಡಿ ಜನ ಓಟ್ ಹಾಕೋಲ್ಲ ಎಂದು ಹೇಳಿದರು.

Exit mobile version